ಮಡಿಕೇರಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಏರ್ಪಡಿಸಿರುವ ಔತಣಕೂಟಕ್ಕೆ ಎಲ್ಲ ಸಚಿವರನ್ನೂ ಕರೆದಿದ್ದಾರೆ. ನಾನು ಕೂಡ ಹೋಗುತ್ತೇನೆ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ಪುನಾರಚನೆ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಹೈಕಮಾಂಡ್ ಸೂಚನೆ ಕೊಡುವವರೆಗೂ ಯಾರು ಏನು ಹೇಳಿದರೂ ಪ್ರಯೋಜನ ಇಲ್ಲ. ಯಾರಾದರೂ ಲಾಬಿ ನಡೆಸುತ್ತಿದ್ದಾರೆ ಎಂಬುದು ನನ್ನ ಗಮನದಲ್ಲಿ ಇಲ್ಲ. ನಾಳೆಯ ಔತಣಕೂಟಕ್ಕೆ ಎಲ್ಲ ಸಚಿವರನ್ನೂ ಆಹ್ವಾನಿಸಿದ್ದು, ನಾನು ಕೂಡ ಹೋಗುತ್ತೇನೆ. ಅದರಲ್ಲಿ ಯಾವುದೇ ವಿಶೇಷ ಇಲ್ಲ ಎಂದರು.
ಸಿಎಂ ಸ್ಥಾನ ಬದಲಾವಣೆ ಆಗುವುದು ಖಚಿತ ಎಂದು ಶ್ರೀರಾಮುಲು ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಶ್ರೀರಾಮುಲು ಬಿಜೆಪಿಯಲ್ಲಿ ಇರುವುದು. ಅವರಿಗೆ ಕಾಂಗ್ರೆಸ್ ಬಗ್ಗೆ ಆಸಕ್ತಿ ಏಕೆ ಎಂದು ಪ್ರಶ್ನಿಸಿದರಲ್ಲದೆ, ಇದು ಶ್ರೀರಾಮುಲು ಅವರಿಗೆ ಬೇಕಿಲ್ಲದ ವಿಚಾರ ಎಂದು ತಿರುಗೇಟು ನೀಡಿದರು.





