ಮಡಿಕೇರಿ : ಒಂಟಿ ಮನೆಯೊಂದರಲ್ಲಿ ವಾಸವಿದ್ದ ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿರುವ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ಬಳಿಯ ಬೇಗೂರು ಗ್ರಾಮದ ಸಮೀಪ ಶುಕ್ರವಾರ ನಡೆದಿದೆ.
ಗೌರಿ, ಕಾಳ, ನಾಗಿ ಹಾಗೂ ಕಾವೇರಿ ಕೊಲೆಯಾದವರು ಎಂದು ಗುರುತಿಸಲಾಗಿದೆ. ಈ ಹತ್ಯಾಕಾಂಡದಿಂದ ಇಡೀ ಜಿಲ್ಲೆ ಬೆಚ್ಚಿ ಬಿದ್ದಿದೆ.
ಗೌರಿ, ಕಾಳ ಎಂಬುವವರ ಮಗಳಾದ ನಾಗಿ, ಪತಿ ಗಿರೀಶ ಎಂಬುವವನೊಂದಿಗೆ ವಾಶವಿದ್ದರು. ಪುತ್ರಿ ಕಾವೇರಿ ಸಹ ಇದ್ದರು. ಕೊಲೆ ಆರೋಪಿ ಗಿರೀಶ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.
ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹಾಗೂ ಪೊನ್ನಂಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿ ಗಿರೀಶ್ ಪತ್ತೆಗೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ.