Mysore
19
broken clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಹಾಡುಹಗಲೇ ಕಾಡನೆ ಪ್ರತ್ಯಕ್ಷ : ಗ್ರಾಮಸ್ಥರಲ್ಲಿ ಆತಂಕ

ನಾಪೋಕ್ಲು: ಸಮೀಪದ ನೆಲಜಿ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ.

ನೆಲಜಿ ಗ್ರಾಮದಿಂದ ಕಕ್ಕಬ್ಬೆ ಗ್ರಾಮಕ್ಕೆ ತೆರಳುವ ಮುಖ್ಯ ರಸ್ತೆಯಲ್ಲಿ ಕಾಡಾನೆಗಳ ಹಿಂಡು ರಸ್ತೆ ದಾಟುವ ದೃಶ್ಯ ಕಂಡು ಬಂದಿದ್ದು, ಸ್ಥಳೀಯರು ಮೊಬೈಲ್‌ನಲ್ಲಿ ಚಿತ್ರವನ್ನು ಸೆರೆಹಿಡಿದಿದ್ದಾರೆ. ಹಾಡುಹಗಲೇ ಕಾಡಾನೆಗಳನ್ನು ಕಂಡ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

ನೆಲಜಿ ಗ್ರಾಮದ ಚೀಯಕ ಪೂವಂಡ ಉಮೇಶ್, ಅಚ್ಛಾಂಡಿರ ಕುಟುಂಬ ಮತ್ತು ಮಣವಟ್ಟೀರ ಕುಟುಂಬಗಳ ತೋಟಗಳಿಗೆ ಕಾಡಾನೆಗಳು ಲಗ್ಗೆ ಇಟ್ಟಿದ್ದು, ಕಾಫಿ ಮತ್ತು ಇತರ ಗಿಡಗಳಿಗೆ ಹಾನಿಯಾಗಿದೆ. ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಭಾಗಮಂಡಲ ಕಕ್ಕಬ್ಬೆ ಉಪವಲಯ ಅರಣ್ಯ ಅಧಿಕಾರಿ ಕಾಳೇಗೌಡ, ಅರಣ್ಯಪಾಲಕ ಶರತ್, ಅರಣ್ಯ ವೀಕ್ಷಕ ಸಚಿನ್ ಹಾಗೂ ಆರ್‌ಆರ್‌ಟಿ ಸಿಬ್ಬಂದಿ ಸೂಕ್ತ ಕ್ರಮ ಕೈಗೊಂಡಿದ್ದಾರೆ.

Tags:
error: Content is protected !!