ಸಿದ್ದಾಪುರ : ಕಾಡಾನೆಯೊಂದು ಶನಿವಾರ ಮಧ್ಯರಾತ್ರಿ ಮನೆ ಒಳಗೆ ನುಗ್ಗಿ ಆಹಾರ ಪದಾರ್ಥಗಳನ್ನು ತಿಂದು ಇತರೆ ವಸ್ತುಗಳನ್ನ ತುಳಿದು ನಾಶ ಮಾಡುವುದರ ಮೂಲಕ ಹಾಡಿ ನಿವಾಸಿಗಳಲ್ಲಿ ಆತಂಕ ಸೃಷ್ಟಿ ಮಾಡಿದೆ. ಕಾಡಾನೆ ಹಾವಳಿಯಿಂದ ಚನ್ನಂಗಿಚಕ್ಕ ರೇಷ್ಮೆ ಹಾಡಿ ನಿವಾಸಿಗಳು ಭಯಭೀತರಾಗಿದ್ದಾರೆ.
ಕಾವೇರಿ ಎಂಬವರ ಮನೆ ಮೇಲೆ ದಾಳಿ ಮಾಡಿದ ಕಾಡಾನೆ ಬಾಗಿಲು ಮುರಿದು ಒಳನುಗ್ಗಿ ಅಕ್ಕಿ ಸೇರಿದಂತೆ ಅಹಾರ ಪದಾರ್ಥಗಳನ್ನು ತಿಂದು ಡ್ರಮ್, ಪಾತ್ರೆ, ಪ್ಲಾಸ್ಟಿಕ್ ವಸ್ತುಗಳು, ಟಿವಿ ಇತರ ಉಪಕರಣಗಳನ್ನು ತುಳಿದು ನಾಶಪಡಿಸಿದೆ.
ಸ್ಥಳಕ್ಕೆ ಗ್ರಾಪಂ ಅಧ್ಯಕ್ಷ ಅರುಣ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪಂಚಾಯಿತಿಯಿಂದ ಅಹಾರ ಕಿಟ್‌ಗಳನ್ನು ವಿತರಣೆ ಮಾಡಿದರು. ಅರಣ್ಯ ಇಲಾಖೆ ಕೂಡಲೇ ಪರಿಹಾರ ನೀಡಿ ಕಾಡಾನೆ ಹಾವಳಿ ತಡೆಗಟ್ಟಬೇಕೆಂದು ಒತ್ತಾಯಿಸಿದರು.





