Mysore
23
overcast clouds

Social Media

ಭಾನುವಾರ, 20 ಏಪ್ರಿಲ 2025
Light
Dark

ಜಿಂಕೆ ಬೇಟೆ: ಇಬ್ಬರು ಬಂಧನ, ಓರ್ವ ಪರಾರಿ

ಮಡಿಕೇರಿ: ಅಕ್ರಮವಾಗಿ ಎರಡು ಹೆಣ್ಣು ಜಿಂಕೆಗಳನ್ನು ಬೇಟೆಯಾಡಿದ ಇಬ್ಬರು ವ್ಯಕ್ತಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಕುಶಾಲನಗರ ವಲಯದ ಆನೆಕಾಡು ಶಾಖೆಯ ಅರಣ್ಯಾಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ್ದಾರೆ. ಈ ವೇಳೆ ಅತ್ತೂರು ನಲ್ಲೂರು ಗ್ರಾಮದ ನವೀನ್ ಕರುಂಬಯ್ಯ ರವರಿಗೆ ಸೇರಿದ ಮುನ್ಸಿಫ್ -ಡಿ ಕಾಫಿ ತೋಟದಲ್ಲಿ ಎರಡು ಹೆಣ್ಣು ಜಿಂಕೆಗಳನ್ನು ಬೇಟೆಯಾಡಿ ಮಾಂಸವನ್ನಾಗಿ ಪರಿವರ್ತಿಸಿ ಶೇಖರಿಸಿಟ್ಟಿದ್ದುದನ್ನು ಹಾಗೂ ಜಿಂಕೆಗಳ ಚರ್ಮ, ತಲೆ ಕಾಲುಗಳನ್ನು ಹಾಗೂ ಹೊಟ್ಟೆಯ ಒಳಭಾಗದ ಅಂಗಾಂಗಳನ್ನು ತೋಟದಲ್ಲಿ ಹೂತಿಟ್ಟಿದ್ದುದನ್ನು ಪತ್ತೆಹಚ್ಚಿದ್ದಾರೆ.

ಎರಡು ಜಿಂಕೆಗಳನ್ನು ಬೇಟೆಯಾಡಿದ ಆರೋಪಿಗಳಾದ ಇದೇ ತೋಟದ ಲೈನ್ ಮನೆಯಲ್ಲಿ ವಾಸವಾಗಿರುವ ಗಣೇಶ್ ಅವರ ಮಗ ಸುನೀಲ್ (34) ಮತ್ತು ಕೆ.ಎಂ. ದೇವಯ್ಯರವರ ಮಗ ಕೆ..ಡಿ. ಮುತ್ತಣ್ಣ (59)ಎಂಬುವವರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಮತ್ತೊಬ್ಬ ಆರೋಪಿ ನಾಣಯ್ಯ ಅವರ ಮಗ ಎ.ಎನ್ ಶ್ಯಾಮ್ (50) ಎಂಬಾತ ತಲೆಮರೆಸಿಕೊಂಡಿದ್ದು, ಈತನಿಗೆ ಪೊಲೀಸರು ಬಲೆ ಬೀಸಿದ್ದಾರೆ. ಬಂಧಿತ ಆರೋಪಿಗಳಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Tags: