Mysore
23
overcast clouds

Social Media

ಮಂಗಳವಾರ, 29 ಸೆಪ್ಟೆಂಬರ್ 2026
Light
Dark

ಬೃಹತ್‌ ನಕಲಿ ಸಿಮ್‌ ದಂಧೆ ಬೆಳಕಿಗೆ: ಮಡಿಕೇರಿಯ ಸಿಮ್‌ ಡಿಸ್ಟ್ರಿಬ್ಯೂಟರ್‌ ಬಂಧನ

ಮಡಿಕೇರಿ: ಆನ್‌ಲೈನ್‌ ವಂಚಕರಿಗೆ ಗ್ರಾಹಕರ ಬದಲಿ ಸಿಮ್‌ ಕಾರ್ಡ್‌ಗಳನ್ನು ಸರಬರಾಜು ಮಾಡುತ್ತಿದ್ದ ಮಡಿಕೇರಿಯ ಸಿಮ್‌ ಡಿಸ್ಟ್ರಿಬ್ಯೂಟರ್‌ ಅಬ್ದುಲ್‌ ರೋಷನ್‌ ಎಂಬಾತನನ್ನು ಕೇರಳದ ಮಲಪ್ಪುರಂನ ಸೈಬರ್‌ ಪೊಲೀಸರು ಬುಧವಾರ ರಾತ್ರಿ ( ಮೇ 8 ) ಬಂಧಿಸಿದ್ದಾರೆ.

2018ರಿಂದ ಏರ್‌ಟೆಲ್‌ ಸಿಮ್‌ ಡಿಸ್ಟ್ರಿಬ್ಯೂಟರ್‌ ಆಗಿ ಕೆಲಸ ನಿರ್ವಹಿಸಿದ್ದ ಆರೋಪಿ ಸದ್ಯ ಜಿಯೊ ಸಿಮ್‌ ಡಿಸ್ಟ್ರಿಬ್ಯೂಟರ್‌ ಆಗಿ ಕೆಲಸ ನಿರ್ವಹಿಸುತ್ತಿದ್ದು, ವೆಂಗಾರ ಮೂಲಕ ವ್ಯಕ್ತಿ ನೀಡಿದ ದೂರಿನ ತನಿಖೆ ವೇಳೆ ಈತ ನಡೆಸುತ್ತಿದ್ದ ದಂಧೆ ಬೆಳಕಿಗೆ ಬಂದಿದೆ.

ಬಂಧನದ ವೇಳೆ 40,000 ಸಿಮ್‌ ಕಾರ್ಡ್‌ಗಳು, 180 ಮೊಬೈಲ್‌ ಫೋನ್‌ಗಳು ಹಾಗೂ 6 ಬಯೋಮೆಟ್ರಿಕ್‌ ಸಾಧನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮಾರ್ಚ್‌ನಲ್ಲಿಯೇ ದಾಖಲಾಗಿತ್ತು ದೂರು:

ವೆಂಗಾರ ಮೂಲದ ವ್ಯಕ್ತಿ ಮಾರ್ಚ್‌ 10ರಂದು ಆನ್‌ಲೈನ್‌ ಟ್ರೇಡಿಂಗ್‌ನಲ್ಲಿ 1.08 ಕೋಟಿ ರೂಪಾಯಿ ವಂಚನೆಗೆ ಒಳಗಾಗಿ ಈ ಸಂಬಂಧ ದೂರನ್ನು ದಾಖಲಿಸಿದ್ದರು. ಈ ದೂರಿನ ಮೇರೆಗೆ ತನಿಖೆ ಆರಂಭಿಸಿದಾಗ ವಂಚಕರಿಗೆ ಅಬ್ದುಲ್‌ ರೋಷನ್‌ ಸಿಮ್‌ ಕಾರ್ಡ್‌ ಸರಬರಾಜು ಮಾಡುತ್ತಿದ್ದ ಮಾಹಿತಿ ಬೆಳಕಿಗೆ ಬಂದಿದೆ.

Tags:
error: Content is protected !!