ಕೊಡಗು: ಸುಮಾರು 200 ವರ್ಷಗಳಿಂದ ಶಾಲಾ ಮಕ್ಕಳಿಂದ ಹಿಡಿದು ಎಲ್ಲರಿಗೂ ನೆರಳಿನ ಆಸರೆ ನೀಡಿದ್ದ ಹತ್ತಿ ಮರವೊಂದು ಅರ್ಧಕ್ಕೆ ಮುರಿದಿದೆ.
ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದಲೂ ಧಾರಾಕಾರ ಮಳೆಯಾಗುತ್ತಿದ್ದು, ಹಲವೆಡೆ ಬೃಹದಾಕಾರದ ಮರಗಳು ಕೂಡ ಧರೆಗುರುಳಿವೆ.
ಭಾರೀ ಮಳೆಯಿಂದ ಕೊಡವ ಕೋಲ್ ಮಂದ್‌ನಲ್ಲಿದ್ದ ಬೃಹತ್ ಗಾತ್ರದ ಹತ್ತಿರ ಮರ ಅರ್ಧಕ್ಕೆ ಮುರಿದು ಬಿದ್ದಿದ್ದು, ಪರಿಸರ ಪ್ರೇಮಿಗಳಿಗೆ ಬೇಸರ ತರಿಸಿದೆ.





