ಮಡಿಕೇರಿ: ಕರುವಿನ ಮೇಲೆ ಹತ್ತಿದ ಕಾರನ್ನು ಜನರು ಮೇಲಕ್ಕೆ ಎತ್ತಿ ಕರು ಜೀವ ಉಳಿಸಿ ಮಾನವೀಯತೆ ಮೆರೆದಿದ್ದಾರೆ.
ಮಡಿಕೇರಿಯ ಲೈಫ್ ಇನ್ಸೂರೆನ್ಸ್ ಕಚೇರಿ ಸಮೀಪವಿರುವ ಸೇತುವೆಯ ಮೇಲೆ ಕರುವೊಂದು ಅಡ್ಡಾಡುತ್ತಿತ್ತು. ಈ ಸಂದರ್ಭ ಬೆಂಗಳೂರಿನ ಪ್ರವಾಸಿ ಕಾರು ರಸ್ತೆಯಲ್ಲಿ ಓಡಾಡುತ್ತಿದ್ದ ಕರುವಿನ ಮೇಲೆ ಹರಿದಿತ್ತು. ಇದೇ ಸಮಯದಲ್ಲಿ ಅಲ್ಲೇ ಇದ್ದ ಗೂಡ್ಸ್ ವಾಹನ ಚಾಲಕರು ಹಾಗೂ ಸಾರ್ವಜನಿಕರು ಸ್ಥಳಕ್ಕೆ ಧಾವಿಸಿ ಬಂದು ಕಾರನ್ನು ಮೇಲಕ್ಕೆ ಎತ್ತಿ ಕರುವನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಬಳಿಕ ಕರುವನ್ನು ಚಿಕಿತ್ಸೆಗಾಗಿ ಪಶು ಆಸ್ಪತ್ರೆಗೆ ಸಾಗಿಸಲಾಯಿತು. ಇವರ ಈ ಮಾನವೀಯತೆಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.