Mysore
18
clear sky

Social Media

ಶನಿವಾರ, 03 ಜನವರಿ 2026
Light
Dark

ಕಾರು ಗುದ್ದಿ ಕರು ಸಾವು; ಸ್ಥಳೀಯರಿಂದ ಕ್ರಮಕ್ಕೆ ಒತ್ತಾಯ

ಮಡಿಕೇರಿ : ರಸ್ತೆ ಮಧ್ಯೆ ನಿಂತಿದ್ದ  ಕರುವಿಗೆ ವೇಗವಾಗಿ ಬಂದ ಇನ್ನೋವಾ ಕಾರು ಗುದ್ದಿದ ಪರಿಣಾಮ ಸ್ಥಳದಲ್ಲಿಯೇ ಕರು ಉಸಿರುಚೆಲ್ಲಿದೆ.

ಭಾನುವಾರ ರಾತ್ರಿ ಸುಂಟಿಕೊಪ್ಪ ಸಮೀಪದ 7ನೇ ಹೊಸಕೋಟೆಯ ಕಲ್ಲುಕೋರೆ ಜಂಕ್ಷನ್‌ನಲ್ಲಿ ಈ ಘಟನೆ ನಡೆದಿದೆ. ಈ ಅನಾಹುತಕ್ಕೆ ಕಾರಣವಾದ ಕಾರಿಗೂ ಹಾನಿ ಉಂಟಾಗಿದೆ.

ಕ್ರಮಕ್ಕೆ ಒತ್ತಾಯ: 7ನೇ ಹೊಸಕೋಟೆ ಯೂನಿಯನ್ ಬ್ಯಾಂಕ್ ಮುಂಭಾಗದಲ್ಲಿ ಮತ್ತು ಕಲ್ಲುಕೋರೆ ಜಂಕ್ಷನ್ ನಲ್ಲಿ ಜಾನುವಾರುಗಳು ಹಿಂಡಾಗಿ ಕೂಡಿರುತ್ತವೆ. ಇವುಗಳಿಂದಾಗಿ ಹೆದ್ದಾರಿಯಲ್ಲಿ ನಿರಂತರವಾಗಿ ಪ್ರಯಾಣಿಸುವ ವಾಹನಗಳ ಸಂಚಾರಕ್ಕೂ ತೊಡಕ್ಕಾಗುತ್ತಿದೆ. ಕೆಲವು ಹಸುಗಳು ವಾಹನಗಳಿಗೆ ಸಿಲುಕಿ ಜೀವ ಕಳೆದುಕೊಳ್ಳುತ್ತಿವೆ.

ಹೀಗಾಗಿ ಹಸುಗಳನ್ನು ಕೊಟ್ಟಿಗೆಯಲ್ಲಿ ಸಾಕದೆ ರಸ್ತೆಗೆ ಬಿಟ್ಟು ಅವುಗಳ ಸಾವಿಗೆ ಕಾರಣರಾಗುತ್ತಿರುವ ಮಾಲೀಕರ ವಿರುದ್ಧ ಕ್ರಮಕೈಗೊಂಡು ಬೀಡಾಡಿ ದನಗಳನ್ನು ಹಿಡಿದು ದೊಡ್ಡಿಗೆ ಸೇರಿಸುವಂತೆ ಸ್ಥಳೀಯರು ಅಲ್ಲಿನ ಗ್ರಾಮ ಪಂಚಾಯಿತಿಯನ್ನು ಒತ್ತಾಯಿಸಿದ್ದಾರೆ.

Tags:
error: Content is protected !!