Mysore
22
overcast clouds
Light
Dark

ಚಿಕಿತ್ಸೆ ಫಲಕಾರಿಯಾಗದೆ ಮರಿ ಆನೆ ಸಾವು !

ಸಿದ್ದಾಪುರ: ಅವರೆಗುಂದ ಬಸವನಹಳ್ಳಿಯ ಬಳಿ ಆಹಾರ ತ್ಯಜಿಸಿ ನಿತ್ರಾಣಗೊಂಡಿದ್ದ  ೫ ತಿಂಗಳ ಮರಿ ಆನೆ ಚಿಕಿತ್ಸೆ ಫಲಕಾರಿಯಾಗದೆ ದುಬಾರೆ ಶಿಬಿರದಲ್ಲಿ ಮೃತಪಟ್ಟಿದೆ.

ಕಳೆದೆರಡು ದಿನಗಳಿಂದ ವನ್ಯಜೀವಿ ವೈದ್ಯರಾದ ಡಾ. ಚೆಟ್ಟಿಯಪ್ಪ ಅವರು ಮರಿ ಆನೆಗೆ ಚಿಕಿತ್ಸೆಯೊಂದಿಗೆ ಆರೈಕೆ ಮಾಡಿದ್ದರು. ಸ್ವಲ್ಪಮಟ್ಟಿಗೆ ಚೇತರಿಸಿಕೊಂಡ ನಂತರ ದುಬಾರೆ ಶಿಬಿರಕ್ಕೆ ಸ್ಥಳಾಂತರಿಸಲಾಗಿತ್ತು.

ಗಂಜಿ, ಹಾಲು ಸೇರಿದಂತೆ ಗ್ಲುಕೋಸ್ ನೀಡಿ ಆರೈಕೆಯೊಂದಿಗೆ ಮತ್ತೆ ಚಿಕಿತ್ಸೆ ಮುಂದುವರಿಸಿ ನಿಗಾ ವಹಿಸಲಾಗಿತ್ತು. ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಮರಿ ಆನೆ ಮೃತಪಟ್ಟಿದೆ.

ನಿಯಮಾನುಸಾರ ಮರಿ ಆನೆಯ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.