ವಿರಾಜಪೇಟೆ : ಕ್ಷುಲ್ಲಕ ಕಾರಣಕ್ಕೆ ವಾಹನ ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಅಪರಾಧಿಗಳಿಗೆ ಪಟ್ಟಣದ 2ನೇ ಅಪಾರ ಜಿ ಮತ್ತು ಸೆಷನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ನಗರದ ಚಿಕ್ಕಪೇಟೆ ನಿವಾಸಿಗಳಾದ ಮಾಳೇಟಿರ ಸುರೇಶ್(೫೬), ಪಟ್ಟಡ ಕಾರ್ಯಪ್ಪ (೫೭) ಶಿಕ್ಷೆಗೆ ಗುರಿಯಾದವರು.
೨೦೧೬ರ ಮೇ ೨೦ರಂದು ಮನೆಗೆ ತೆರಳುತ್ತಿದ್ದ ಎನ್.ಡಿ.ಅನಿಲ್ ಕುಮಾರ್, ಶುಂಠಿ ವ್ಯಾಪಾರಿ ಎಂ.ಬಿ.ರಾಜೇಶ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕತ್ತಿ ಮತ್ತು ದೊಣ್ಣೆಯಿಂದ ಹಲ್ಲೆ ಮಾಡಿದ್ದರು. ಪರಿಣಾಮ ಅನಿಲ್ ಕುಮಾರ್ ಮತ್ತು ರಾಜೇಶ ಗಂಭೀರವಾಗಿ ಗಾಯಗೊಂಡಿದ್ದರು.
ಗಾಯಳುಗಳು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಎರಡು ವರ್ಷಗಳು ಜೈಲು ಶಿಕ್ಷೆ ಮತ್ತು ೧೪ ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಸಂತ್ರಸ್ತರ ಪರವಾಗಿ ಸರ್ಕಾರಿ ಅಭಿಯೋಜಕ ಯಾಸಿನ್ ಅಹಮ್ಮದ್ ವಾದ ಮಂಡಿಸಿದರು.



