Ashburn
73
scattered clouds
Light
Dark

ನಾಳೆಯಿಂದ ನಾಲ್ಕು ದಿನ ಕೊಡಗಿನಲ್ಲಿ ನಿಷೇಧಾಜ್ಞೆ ಜಾರಿ

ಕೊಡಗು : ಆಗಸ್ಟ್ 26ರಂದು ಕಾಂಗ್ರೆಸ್ ನಿಂದ ಮಡಿಕೇರಿ ಚಲೋ ಹಾಗೂ ಬಿಜೆಪಿ ವತಿಯಿಂದ ಜನಜಾಗೃತಿ ಸಮಾವೇಶವನ್ನು ಹಮ್ಮಿಕೊಂಡಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ನಾಳೆಯಿಂದ ಆ.24 ರಿಂದ ಬೆಳಿಗ್ಗೆ ಆರು ಗಂಟೆಯಿಂದ ಆಗಸ್ಟ್ 27ರ ಸಂಜೆ 6:00 ವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಜಿಲ್ಲಾಧಿಕಾರಿ ಡಾ. ಸತೀಶ್ ಆದೇಶ ಹೊರಡಿಸಿದ್ದಾರೆ.

ಈ ಸಮಯದಲ್ಲಿ ಯಾವುದೇ ಸಮಾರಂಭ ಅಥವಾ ಸಭೆಗಳನ್ನು ನಡೆಸುವಂತಿಲ್ಲ, ಹೆಚ್ಚು ಗುಂಪು ಸೇರುತ್ತಿಲ್ಲ ಘೋಷಣೆ ಕೂಗುವಂತಿಲ್ಲ ಇದರ ಜೊತೆಗೆ ಯಾವುದೇ ವಿಜಯೋತ್ಸವ ಆಚರಿಸುವಂತಿಲ್ಲ ಎಂದು ತಿಳಿಸಲಾಗಿದೆ. ಇದರ ಜೊತೆಗೆ ನಿಷೇಧನ್ಯ ಈ ಅವಧಿಯಲ್ಲಿ ಬೆಳಿಗ್ಗೆ 6:00 ಗಂಟೆಯಿಂದ ಮಧ್ಯರಾತ್ರಿಯವರೆಗೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ