Mysore
21
light rain

Social Media

ಶನಿವಾರ, 19 ಸೆಪ್ಟೆಂಬರ್ 2026
Light
Dark

ಕಬಾಬ್ ಮಾರುವನ ಕೊಲೆ: ಮತ್ತಿಬ್ಬರ ಬಂಧನ

ಮೈಸೂರು: ಕಬಾಬ್ ಮಾರಾಟ ಮಾಡುವವನ ಹತ್ಯೆ ಸಂಬಂಧ ಎನ್.ಆರ್ ಠಾಣೆ ಪೊಲೀಸರು ತಲೆ ಮರೆಸಿಕೊಂಡಿದ್ದ ಇನ್ನಿಬ್ಬರು ಆರೋಪಿಗಳನ್ನು ಬುಧವಾರ ಬಂಧಿಸಿದ್ದಾರೆ.
ಜಭಿ ಅಲಿಯಾಸ್ ಬ್ರೂಸ್ಲಿ ಮತ್ತು ಇಕ್ಬಾಲ್ ಬಂಧಿಸಿರುವುದು. ಮಂಗಳವಾರ ಸೈಯದ್ ಝೈನುಲ್ಲಾ ಬಿನ್ ಮತ್ತು ಬಬನ್ ಎಂಬವರನ್ನು ಬಂಧಿಸಲಾಗಿತ್ತು.
‘ಹುಡುಗಿಯರನ್ನು ಚುಡಾಯಿಸಬೇಡಿ’ ಎಂದು ಬುದ್ಧಿವಾದ ಹೇಳಿದ ಕಬಾಬ್ ಮಾರಿ ಜೀವನ ನಡೆಸುತ್ತಿದ್ದ ಕಲ್ಯಾಣಗಿರಿ ನಿವಾಸಿ ಸಯ್ಯದ್‌ ಮನ್ಸೂರ್(32) ಎಂಬವನ ಅಪಹರಣಕ್ಕೆ ಸಂಬಂಧಪಟ್ಟಂತೆ ಭಾನುವಾರ ರಾತ್ರಿ ಎನ್.ಆರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಪಹರಣಗೊಂಡ ಸ್ಥಳವನ್ನು ಮತ್ತು ಸುತ್ತಲು ಇರುವ ಸಿಸಿ ಕ್ಯಾಮೆರಾವನ್ನು ಪರಿಶೀಲನೆ ನಡೆಸಿದ ಪೊಲೀಸರಿಗೆ ಮನ್ಸೂರ್‌ನನ್ನು ಕೊಲೆ ಮಾಡಿರಬಹುದು ಎಂಬ ಸಂಶಯ ಮೂಡಿತ್ತು. ಕಾರ್ಯಾಚರಣೆ ಕೈಗೊಂಡ ಪೊಲೀಸರು ಮಂಗಳವಾರ ಬೆಳಿಗ್ಗೆ ಸೈಯದ್ ಝೈನುಲ್ಲಾ ಬಿನ್ ಮತ್ತು ಬಬನ್ ಎಂಬಾತನನ್ನು ಬಂಧಿಸಿದ್ದರು. ಆ ನಂತರ ಸಂಜೆ ಪಾಂಡವಪುರದ ದರಸನಕುಪ್ಪೆ ಬಳಿಯ ನಾಲೆಯಲ್ಲಿ ಸಯ್ಯದ್‌ ಮನ್ಸೂರ್ ದೇಹ ಪತ್ತೆಯಾಗಿತ್ತು. ತಲೆಮರೆಸಿಕೊಂಡಿದ್ದ ಇನ್ನಿಬ್ಬರು ಆರೋಪಿಗಳಾದ ಜಭಿ ಅಲಿಯಾಸ್ ಬ್ರೂಸ್ಲಿ ಮತ್ತು ಇಕ್ಬಾಲ್ ಎಂಬವರನ್ನು ಬುಧವಾರ ಬಂಧಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!