ಹನೂರು:ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟದಲ್ಲಿ ಮೂರನೇ ಕಾರ್ತೀಕ ಸೋಮವಾರ ಪ್ರಯುಕ್ತ ಮುಂಜಾನೆಯಿಂದಲೇ ವಿಶೇಷ ಪೂಜೆ ಸಂಪ್ರದಾಯದಂತೆ ವಿಧಿವಿಧಾನಗಳೊಂದಿಗೆ ಜರುಗಿತು.
ಕನಕದಾಸ ಜಯಂತಿ, ಎರಡನೇ ಶನಿವಾರ ವಾರಾಂತ್ಯದ ರಜೆ ಹಿನ್ನೆಲೆ ಜಿಟಿಜಿಟಿ ಮಳೆಯ ನಡುವೆಯೂ ಸಾವಿರಾರು ಭಕ್ತರು ಮಲೆಮಾದೇಶ್ವರ ದರ್ಶನ ಪಡೆದಿದ್ದಾರೆ . ಇಂದು ಮೂರನೇ ಕಾರ್ತೀಕ ಸೋಮವಾರ ಪ್ರಯುಕ್ತ ಹೆಚ್ಚಿನ ಭಕ್ತಾದಿಗಳು ಮಲೆಮಾದೇಶ್ವರ ದರ್ಶನ ಪಡೆಯುತ್ತಿದ್ದಾರೆ.
60 ಸಾವಿರ ಲಾಡು ಮಾರಾಟ : ಕಳೆದ 3ದಿನಗಳಿಂದ ಸರ್ಕಾರಿ ರಜೆ ಸೇರಿದಂತೆ ವಾರಾಂತ್ಯದ ರಜೆ ಇದ್ದ ಹಿನ್ನೆಲೆ ಹೆಚ್ಚಿನ ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಹಿನ್ನೆಲೆ 60 ಸಾವಿರ ಲಾಡು ಮಾರಾಟವಾಗಿದೆ. 3ದಿನಗಳಲ್ಲಿ 37ಲಕ್ಷ ಆದಾಯ : ವಾರಾಂತ್ಯದ ದಿನಗಳಲ್ಲಿ ಶ್ರೀಕ್ಷೇತ್ರ ಮಲೆಮಹದೇಶ್ವರ ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ಸೇವೆ ,ಉತ್ಸವ, ಚಿನ್ನದ ರಥೋತ್ಸವ, ಬಸವವಾಹನ, ಹುಲಿವಾಹನ, ರುದ್ರಾಕ್ಷಿ ವಾಹನಗಳಿಂದ 37 ಲಕ್ಷದ 43ಸಾವಿರದ 969 ರೂ ಆದಾಯ ಬಂದಿದೆ ಎಂದು ಲೆಕ್ಕಾಧೀಕ್ಷಕ ಪ್ರವೀಣ್ ಪಾಟೀಲ್ ತಿಳಿಸಿದರು.