ಮೈಸೂರು: ನಗರದ ಮೆಟ್ರೊಪೋಲ್ ವೃತ್ತದಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪ್ರತಿಮೆಯ ಮುಂಭಾಗ ಇಂದು ಸಂಜೆ 26/11 ವಾಣಿಜ್ಯ ಮಹಾನಗರಿ ಮುಂಬಯಿ ದಾಳಿಗೆ 14 ವರ್ಷದ ಪ್ರಯುಕ್ತ ಯುವ ಭಾರತ್ ಸಂಘಟನೆ ಹಾಗೂ ಟೀo ಮೈಸೂರು ಮತ್ತು ವೀರ ಸಾವರ್ಕರ್ ಯುವ ಬಳಗ ವತಿಯಿಂದ ಹುತಾತ್ಮರನ್ನು ನೆನೆದು ಮೇಣದ ಬತ್ತಿ ಹಿಡಿದು ಅವರನ್ನು ಸ್ಮರಿಸಿ ಒಂದು ನಿಮಿಷ ಕಾಲ ಮೌನ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಯುವ ಭಾರತ ಸಂಘಟನೆಯ ಅಧ್ಯಕ್ಷರಾದ ಜೋಗಿ ಮಂಜು ಅವರು 26/11 ಭಾರತೀಯರ ಪಾಲಿಗೆ ಅತ್ಯಂತ ಕರಾಳ ದಿನಕ್ಕೆ ಇವತ್ತಿನ ದಿನ ಬರೋಬ್ಬರಿ 14 ವರ್ಷಗಳ ಹಿಂದೆ ಇಸ್ಲಾಂ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ ದಿಂದ ದೇಶದ ವಾಣಿಜ್ಯ ನಗರಿಯಲ್ಲಿರುವ ಮುಂಬಯಿನ ತಾಜ್ ಮಹಲ್ ಪ್ಯಾಲೆಸ್ ಹೋಟೆಲ್ ಸೇರಿದಂತೆ ಅನೇಕ ಸ್ಥಳಗಳ ಮೇಲೆ ನಡೆದ ಈ ದಾಳಿ ಮುಂಬಯಿನ ವಾಣಿಜ್ಯ,ವ್ಯಾಪಾರ ಮತ್ತು ವ್ಯವಹಾರ ತಲ್ಲಣಗೊಳಿಸಿದಲ್ಲದೇ ಇಡಿ ರಾಷ್ಟ್ರವನ್ನೇ ತಲ್ಲಣಗೊಳಿಸಿತ್ತು.
ಅಂದು ಈ ದಾಳಿ ಬರೀ ಮುಂಬಯಿನ ಮೇಲೆ ದಾಳಿ ಅಲ್ಲ ಇದು ಪ್ರತಿಯೊಬ್ಬ ಭಾರತೀಯನ ಮನಸ್ಸಿನ ಮೇಲೆ ಆದ ದಾಳಿ ಅಂತಾ ಇಡೀ ದೇಶವೇ ಭಾವಿಸಿತ್ತು.ದಾಳಿಯಲ್ಲಿ ನಮ್ಮ ನಾಡಿನ ಹೆಮ್ಮೆಯ ಪುತ್ರ, ಮೇಜರ್ ಸಂದೀಪ ಉನ್ನಿಕೃಷ್ಣನ್ನ ಸೇರಿದಂತೆ ಪೋಲೀಸರು, ಸೈನಿಕರು,ಮುಂಬಯಿನ ನಿವಾಸಿಗಳು ಸೇರಿ 150ಕ್ಕೂ ಹೆಚ್ಚು ಜನ ಹುತಾತ್ಮವಾದರು,300 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು ಎಂದು ಹುತಾತ್ಮರು ನಮಗೆ ಸದಾ ಕಾಲ ಆದರ್ಶವಾಗಿರುತ್ತಾರೆ ಎಂದರು.
ನಂತರ ಟೀo ಮೈಸೂರು ತಂಡದ ಸಂಚಾಲಕರಾದ ಗೋಕುಲ್ ಗೋವರ್ಧನ್ ಮಾತನಾಡಿ ನಮ್ಮ ಇಂದಿನ ಸುಂದರ ಜೀವನ, ಸಂತೋಷಕ್ಕಾಗಿ ತಮ್ಮ ಅಂದಿನ ಜೀವನವನ್ನೇ ಅರ್ಪಿಸಿದ ಅಸಂಖ್ಯಾತ ಧೀರ ಯೋಧರ ಬಲಿದಾನ,ತ್ಯಾಗ ಸ್ಮರಿಸಿಕೊಳ್ಳೊಣ ಮತ್ತು ನೆನಪು ಮಾಡಿಕೊಳ್ಳೊಣ ಎಂದರು.
ಸಂಧರ್ಭದಲ್ಲಿ ಯುವ ಭಾರತ್ ಸಂಘಟನೆಯ ಅಧ್ಯಕ್ಷರಾದ ಜೋಗಿ ಮಂಜು, ವೀರ ಸಾವರ್ಕರ್ ಯುವ ಬಳಗದ ಅಧ್ಯಕ್ಷರಾದ ರಾಕೇಶ್ ಭಟ್, ಟೀo ಮೈಸೂರು ಮುಖ್ಯ ಸಂಚಾಲಕರಾದ ಗೋಕುಲ್ ಗೋವರ್ಧನ್, ಸಂದೇಶ್, ಪ್ರಮೋದ್ ಗೌಡ, ಟಿ ಎಸ್ ಅರುಣ್, ಎಸ್ ಎನ್ ರಾಜೇಶ್,ಅನೋಜ್, ಗಣೇಶ್ ಗೋಪಾಲ್, ಮಣಿರತ್ನಂ, ಚಂದ್ರಪ್ಪ, ಹರೀಶ್ ಬಾಬು, ಅನಿಲ್ ಜೈನ್, ಯತೀಶ್, ಮಿನುಗು, ಹಿರಿಯಣ್ಣ ಆನಂದ್, ರಘು, ಬಸವರಾಜು, ಹಾಗೂ ಇತರರು ಹಾಜರಿದ್ದರು.