ಹುಣಸೂರು: ತಾಲ್ಲೂಕಿನ ಗಾವಡಗೆರೆ ಹೋಬಳಿಯ ಬಿಳಿಗೆರೆ ಗ್ರಾಮದ ಅನ್ವೇಷಣಾ ಪದವಿಪೂರ್ವ ಕಾಲೇಜಿನಲ್ಲಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಜನ್ಮ ದಿನವನ್ನು ವಿಶ್ವಸಂಸ್ಥೆ ಘೋಷಿಸಿರುವ ವಿಶ್ವ ವಿದ್ಯಾರ್ಥಿಗಳ ದಿನವಾಗಿ ಆಚರಿಸಲಾಯಿತು.
ಕೃಷಿ ಮಾರಾಟ ಇಲಾಖೆಯ ಹೆಚ್ಚುವರಿ ನಿವೃತ್ತ ನಿರ್ದೇಶಕ ಹಾಗೂ ಅನ್ವೇಷಣಾ ಕಾಲೇಜಿನ ಸಂಸ್ಥೆಯ ಸಂಸ್ಥಾಪಕ ಹೆಚ್.ಕೆ.ಚಂದ್ರಮೋಹನ್ ಮಾತನಾಡಿ, ಮಹನೀಯರ ಮೌಲ್ಯಗಳನ್ನು ಅನುಸರಿಸಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದಾಗ ಇಂತಹ ದಿನಗಳ ಆಚರಣೆಗೆ ಒಂದು ಗೌರವ ಬರುತ್ತದೆ ಎಂದು ಅಭಿಪ್ರಾಯಪಟ್ಟರು.
ಒಂದು ಸಾಧಾರಣ ಕುಟುಂಬದಲ್ಲಿ ಜನಿಸಿದ ವ್ಯಕ್ತಿ ಏನೆಲ್ಲ ಸಾಧನೆಗಳನ್ನು ಮಾಡಬಹುದು ಎಂಬುದಕ್ಕೆ ಅತ್ಯುತ್ತಮ ಉದಾಹರಣೆ ಭಾರತ ರತ್ನ ಅಬ್ದುಲ್ ಕಲಾಂರವರು. ನಾವು ಹೇಗಿದ್ದೆವು ಎಂಬುದರ ಬದಲಾಗಿ ಹೇಗೆ ಬೆಳೆಯಬೇಕೆಂಬುದನ್ನು ಯೋಚಿಸಬೇಕು. ನೀವು ನಿಮ್ಮ ತಂದೆ ತಾಯಿಯರ ಹೆಸರಿನಿಂದ ಗುರುತಿಸಿಕೊಳ್ಳುವ ಬದಲು ನಿಮ್ಮ ಹೆಸರಿನಿಂದ ನಿಮ್ಮ ತಂದೆ ತಾಯಿಗಳನ್ನು ಗುರುತಿಸುವಂತಹ ಸಾಧಕರಾಗಿ ಬೆಳೆಯಬೇಕು ಎಂದು ನುಡಿದರು.
ಡಾ.ಎ.ಪಿ.ಜಿ.ಅಬ್ದುಲ್ ಕಲಾಂರವರನ್ನು ಕುರಿತು ಐಶ್ವರ್ಯ, ಪ್ರಿಯಾ, ವರುಣ್, ರಕ್ಷಿತಾ, ಮಧುಶ್ರೀ, ಹೃತ್ವಿಕ್ , ಗಗನ್, ಸಾರಿಕಾ, ಉಮಾಮಹೇಶ್ವರಿ ಮಾತನಾಡಿದರು. ಸರಸ್ವತಿ ಚಂದ್ರಮೋಹನ್, ಉಪಪ್ರಾಂಶುಪಾಲರಾದ ಆಶಾ ನಂದೀಶ್, ಉಪನ್ಯಾಸಕರು ಹಾಗೂ ಕಚೇರಿ ಸಿಬ್ಬಂದಿ ಹಾಜರಿದ್ದರು.