ಹನೂರು : ಮಲೆ ಮಹದೇಶ್ವರ ಸ್ವಾಮಿ ಭಕ್ತಾದಿಗಳು ಕಾರ್ತೀಕ ಮಾಸ ಹಾಗೂ ಅಮಾವಾಸ್ಯೆ ದಿನದಂದು ನಾಗಮಲೆ ಮಹದೇಶ್ವರ ಸ್ವಾಮಿ ಸೇವಾ ಸಮಿತಿ ವತಿಯಿಂದ ಶ್ರೀ ಕ್ಷೇತ್ರ ನಾಗಮಲೆಯಲ್ಲಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಿದ್ದರು.
ನಾಗಮಲೆ ಶ್ರೀಕ್ಷೇತ್ರದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಸಹ ಕಾರ್ತೀಕ ಮಾಸದ ಅಮಾವಾಸ್ಯೆ ಪ್ರಯುಕ್ತ ಭಕ್ತಾದಿಗಳಿಗೆ ಅನ್ನದಾಸೋಹವನ್ನು ಶ್ರೀ ನಾಗಮಲೆ ಗ್ರೂಪ್ಸ್. ಮೈಸೂರು, ಬೆಂಗಳೂರು ಮತ್ತು ನಂಜನಗೂಡು ರವರ ವತಿಯಿಂದ ನೆರವೇರಿಸಲಾಯಿತು.
ಅನ್ನದಾನಕ್ಕೆ ಅಗತ್ಯವಾದ ದವಸ ದಾನ್ಯಗಳನ್ನು ರಾತ್ರಿಯಿಂದಲೇ ಸಿದ್ದಪಡಿಸಿಕೊಂಡು ಬೆಳಿಗ್ಗೆ 6.00ಗಂಟೆಗ ನಾಗಮಲೆ ಮಹದೇಶ್ವರ ಸ್ವಾಮಿಗೆ ಪ್ರಥಮ ಪೂಜೆ ಅಭಿಷೇಕಗಳನ್ನು ಸಲ್ಲಿಸಿ, 8.00 ಗಂಟೆಯಿಂದಲೇ ಅನ್ನದಾನವನ್ನು ಪ್ರಾರಂಭಿಸಲಾಯಿತು.
ಬೆಟ್ಟ ಗುಡ್ಡಗಳನ್ನು ಹತ್ತಿ ಸುತ್ತಿ ಸುಸ್ತಾಗಿ ಬಂದಿದ್ದ ಭಕ್ತಾದಿಗಳು ಸ್ವಾಮಿಯ ಪ್ರಸಾದವನ್ನು ಸೇವಿಸಿ ಸಂತೃಪ್ತರಾದರು. ಸಂಜೆ 5.00ಗಂಟೆಯವರೆಗೂ ನಡೆದ ದಾಸೋಹದಲ್ಲಿ ಸುಮಾರು 2000ಕ್ಕೂ ಹೆಚ್ಚು ಜನ ಭಕ್ತಾದಿಗಳು ಪ್ರಸಾದವನ್ನು ಸೇವಿಸಿ,ಪುನೀತರಾದರು. ಈ ಸಂದರ್ಭದಲ್ಲಿ ಶ್ರೀ ನಾಗಮಲೆ ಗ್ರೂಪ್ಸ್ ನ ಎಲ್ಲಾ ಸದಸ್ಯರುಗಳು ಹಾಜರಿದ್ದರು.