Mysore
21
broken clouds

Social Media

ಬುಧವಾರ, 26 ಆಗಸ್ಟ್ 2026
Light
Dark

ಕೊಡಗು ಎಸ್ಪಿಯಾಗಿ ಕೆ.ರಾಮರಾಜನ್ ನೇಮಕ

ಮಡಿಕೇರಿ: ಕೊಡಗು ಜಿಗೆ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆ.ರಾಮರಾಜನ್ ನೇಮಕಗೊಂಡಿದ್ದಾರೆ.
ಈ ಹಿಂದಿನ ಎಸ್ಪಿಯಾಗಿದ್ದ ಕ್ಯಾ. ಎಂ.ಎ.ಅಯ್ಯಪ್ಪ ಇಂಟಲಿಜೆನ್ಸಿ ಎಸ್.ಪಿ.ಯಾಗಿ ವರ್ಗಾವಣೆಗೊಂಡಿದ್ದಾರೆ. ಬೆಂಗಳೂರು ನಗರ ಕಮಾಂಡ್ ಸೆಂಟರ್ ಡಿಸಿಪಿಯಾಗಿದ್ದ ಕೆ.ರಾಮರಾಜನ್‌ರನ್ನು ಕೊಡಗು ಜಿಲ್ಲೆಯ ನೂತನ ಎಸ್ಪಿಯಾಗಿ ನೇಮಕಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಎಂ.ಎ.ಅಯ್ಯಪ್ಪ ಶಿಸ್ತಿನ ಅಧಿಕಾರಿಯಾಗಿ ಕೊಡಗಿನಲ್ಲಿ ಗಮನ ಸೆಳೆದಿದ್ದರು. ಸೋಮವಾರ ರಾಮರಾಜನ್ ಕೊಡಗು ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!