123 ಗ್ರಾಂ. ಚಿನ್ನ, 55.11 ಲಕ್ಷ ರೂ. ಸಂಗ್ರಹ
ಶ್ರೀರಂಗಪಟ್ಟಣ: ಗಂಜಾಂ ನಿಮಿಷಾಂಬ ದೇವಾಲಯದ ಹುಂಡಿ ಎಣಿಕೆ ನಡೆದಿದ್ದು, ಎಣಿಕೆ ನಡೆಯುವ ಸಂದರ್ಭದಲ್ಲಿ 123 ಗ್ರಾಂ. ಚಿನ್ನ, 49 ಗ್ರಾಂ. ಬೆಳ್ಳಿ ನಾಣ್ಯ ಇದ್ದು, ಹುಂಡಿಯಲ್ಲಿ ಒಟ್ಟು 55,11,382 ರೂ.ಗಳು ಸಂಗ್ರಹವಾಗಿದೆ.
ನಿಮಿಷಾಂಬ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಮಹೇಶ್, ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೃಷ್ಣಪ್ಪ, ಸೂರ್ಯ ನಾರಾಯಣ ಭಟ್, ಸ್ತ್ರೀಶಕ್ತಿ ತಂಡ ಹಾಗೂ ಎಸ್‌ಬಿಐ ಬ್ಯಾಕ್ ಸಿಬ್ಬಂದಿ ಹಾಗೂ ನಿಮಿಷಾಂಬ ದೇವಾಲಯದ ಸಿಬ್ಬಂದಿ ಎಣಿಕೆ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.