Mysore
27
few clouds

Social Media

ಶುಕ್ರವಾರ, 17 ಜನವರಿ 2025
Light
Dark

ಹುಣಸೂರು : ನಗರಸಭೆ ಸದಸ್ಯನಿಂದ ಪೊಲೀಸ್‌ ಅಧಿಕಾರಿಯ ಮೇಲೆ ಹಲ್ಲೆ : ದೂರು ದಾಖಲು 

ಹುಣಸೂರು : ಕರ್ತವ್ಯ ನಿರತ ಪೊಲೀಸ್‌ ಅಧಿಕಾರಿಯ ಮೇಲೆ ನಗರ ಸಭೆಯ ಸದಸ್ಯ ಬೆದರಿಕೆ ಮತ್ತು ಹಲ್ಲೆಯನ್ನು ಮಾಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ಹುಣಸೂರು ಪೊಲೀಸ್‌ ಠಾಣೆಯಲ್ಲಿ ದೂರು  ದಾಖಲಾಗಿದೆ.

ಮೈಸೂರು ನಗರಸಭೆ ಮೈದಾನದಲ್ಲಿ ಆಯೋಜನೆ ಮಾಡಲಾಗಿದ್ದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಆಯೋಜಕರ ಮನವಿಯಂತೆ ಸಾರ್ವಜನಿಕರನ್ನು ಅಂಕಣದಿಂದ ಹೊರಹೋಗುವಂತೆ ಹೆಡ್‌ ಕಾನ್ಸ್‌ ಟೇಬಲ್‌ ಮಹೇಶ್‌ ಅವರು ಹೇಳಿದ್ದಾರೆ. ಈ ವೇಳೆ ಹುಣಸೂರು ನಗರಸಭೆಯ 17 ನೇ ವಾರ್ಡಿನ ಸದಸ್ಯರಾದ ಮನು ಅವರನ್ನು ಕ್ರೀಡಾಂಗಣದಿಂದ ಹೊರ ಹೋಫಗುವಂತೆ ತಿಳಿಸಿದ್ದಾರೆ. ಈ ವೇಳೆ ಮನು ಅವರು ಏಕವಚನದಲ್ಲಿ ಕೂಗಾಡಿದ್ದಲ್ಲದೆ ಕರ್ತವ್ಯದಲ್ಲಿದ್ದ ಮಹೇಶ್‌ ಅವರನ್ನು ಎಳೆದಾಡಿದ್ದಾರೆ. ಈ ವೀಡಿಯೋ  ಸಾಮಾಜಿಕ ಜಾಲತಾಣದಲ್ಲಿ  ವೈರಲ್‌  ಅಗಿದೆ.

ಕರ್ತವ್ಯದಲ್ಲಿದ್ದ ಪೊಲೀಸ್‌ ಅಧಿಕಾರಿಯ ಮೇಲೆ ಹಲ್ಲೆ ಮತ್ತು ಕೊಲೆ ಆರೋಪಕ್ಕೆ ಸಂಬಂಧಿಸಿದಂತೆ ಇದೀಗ ದೂರು ದಾಖಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ