ಮೈಸೂರು: ಸಾರ್ವಜನಿಕರ ಪ್ರಾಣ-ಆಸ್ತಿಪಾಸ್ತಿ ರಕ್ಷಣೆಗೆ ದಿನದ ೨೪ ಗಂಟೆಗಳ ಕಾಲ ಸೇವೆ ಸಲ್ಲಿಸುವ ಜೊತೆಗೆ ದಿನದಿಂದ ದಿನಕ್ಕೆ ಜನಸಂಖ್ಯೆಯ ಆಧಾರದ ಮೇಲೆ ಠಾಣೆಗಳನ್ನು ಹೆಚ್ಚಿಸುತ್ತಿರುವ ಹಿನ್ನಲೆಯೆಲ್ಲಿ ನೂತನವಾಗಿ ನಿರ್ಮಿಸಿರುವ ಎರಡು ಪೊಲೀಸ್ ಠಾಣೆ ಸೇರಿ ನೂತನವಾಗಿ ನಿರ್ಮಿಸಿರುವ ನಾಲ್ಕು ಕಟ್ಟಡಗಳನ್ನು ಸೇವೆಗೆ ಲೋಕಾರ್ಪಣೆ ಮಾಡಲಾಯಿತು.
ಎರಡು ವರ್ಷಗಳಿಂದ ಬಾಡಿಗೆ ಕಟ್ಟಡದಿಂದ ನಡೆಯುತ್ತಿದ್ದ ಆಲನಹಳ್ಳಿ ಮತ್ತು ಹೆಬ್ಬಾಳು ಪೊಲೀಸ್ ಠಾಣೆಗೆ ಸ್ವಂತ ಕಟ್ಟಡಗಳನ್ನ್ನುನಿರ್ಮಾಣ ಮಾಡಿರುವುದರಿಂದ ಮುಂದಿನ ದಿನಗಳಲ್ಲಿ ಹೊಸ ಕಟ್ಟಡದಲ್ಲಿ ಕಾರ್ಯಾರಂಭ ಮಾಡಲಿದೆ.
ನಗರದಲ್ಲಿ ಗುರುವಾರ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ಬನ್ನೂರು ರಸ್ತೆಯಲ್ಲಿ ನಿರ್ಮಿಸಿರುವ ಆಲನಹಳ್ಳಿ ಠಾಣೆ, ಹೆಬ್ಬಾಳು ರಿಂಗ್ ರಸ್ತೆಯ ಸಮೀಪ ನಿರ್ಮಿಸಿರುವ ಹೆಬ್ಬಾಳ್ ಪೊಲೀಸ್ ಠಾಣೆ,ಪೊಲೀಸ್ ತರಬೇತಿ ಶಾಲೆಯ ನೂತನ ಕಟ್ಟಡ, ಕರ್ನಾಟಕ ಪೊಲೀಸ್ ಅಕಾಡೆಮಿ ಆವರಣದಲ್ಲಿ ನಿರ್ಮಿಸಿರುವ ಕಟ್ಟಡವನ್ನು ಟೇಪು ಕತ್ತರಿಸುವುದರ ಮೂಲಕ ಉದ್ಘಾಟಿಸಿದರು.
ಶಾಸಕರಾದ ಎಸ್.ಎ.ರಾಮದಾಸ್,ಎಲ್.ನಾಗೇಂದ್ರ,ಮಹಾಪೌರ ಶಿವಕುಮಾರ್, ಉಪ ಮಹಾಪೌರರಾದ ಡಾ.ಜಿ.ರೂಪಾ, ನಗರಪಾಲಿಕೆ ಸದಸ್ಯರಾದ ರಜನಿ ಅಣ್ಣಯ್ಯ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ಶಿವಕುಮಾರ್, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್ ಗೌಡ, ಕಾಡಾ ಅಧ್ಯಕ್ಷ ಜಿ.ನಿಜಗುಣರಾಜು, ಮೈಲ್ಯಾಕ್ ಅಧ್ಯಕ್ಷ ರಘು ಕೌಟಿಲ್ಯ, ಡಿಜಿಪಿ(ನೇಮಕಾತಿ) ಡಾ.ಪಿ.ರವೀಂದ್ರನಾಥ್, ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಅರುಣ್ ಚಕ್ರವರ್ತಿ, ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕ ಅನುಪಮ್ ಅಗರವಾಲ್, ಐಜಿಪಿ ಪ್ರವೀಣ್ ಮಧುಕರ್, ಪೊಲೀಸ್ ತರಬೇತ ಶಾಲೆಯ ಪ್ರಾಂಶುಪಾಲ ಎಚ್.ಟಿ.ಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್, ಡಿಸಿಪಿಗಳಾದ ಎಂ.ಎಸ್.ಗೀತಾ ಪ್ರಸನ್ನ, ಶಿವರಾಜು, ಕರ್ನಾಟಕ ಪೊಲೀಸ್ ಅಕಾಡೆಮಿ ಉಪ ನಿರ್ದೇಶಕಿ ದಿವ್ಯ ಸಾರಾ ಥಾಮಸ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ, ಎಸಿಪಿಗಳಾದ ಪರಶುರಾಮಪ್ಪ, ಗಂಗಾಂಧರಸ್ವಾಮಿ ಇನ್ನಿತರರು ಹಾಜರಿದ್ದರು.
ತಲಾ ೨.೧೫ ಕೋಟಿ ವೆಚ್ಚದ ೨ ಪೊಲೀಸ್‌ಠಾಣೆ: ತಲಾ ೨.೧೫ ಕೋಟಿ ರೂ.ವೆಚ್ಚದಲ್ಲಿ ಆಲನಹಳ್ಳಿ,ಹೆಬ್ಬಾಳು ಪೊಲೀಸ್ ಠಾಣೆಯನ್ನು ನಿರ್ಮಾಣ ಮಾಡಲಾಗಿದೆ. ಕಟ್ಟಡದ ನೆಲಮಹಡಿಯಲ್ಲಿಲಾಬಿ, ಪೊಲೀಸ್ ನಿರೀಕ್ಷಕರ ಕೊಠಡಿ, ಸಬ್ ಇನ್‌ಸ್ಪೆಕ್ಟರ್ ಕೊಠಡಿ ಶೌಚಾಲಯ ಒಳಗೊಂಡಂತೆ, ಠಾಣಾಧಿಕಾರಿ ಕೊಠಡಿ, ಗಣಕಯಂತ್ರ ವಿಭಾಗ, ಉಗ್ರಾಣ, ಮಲಖಾನ ಕೊಠಡಿ, ವರ್ಕ್ ಸ್ಟೇಷನ್, ಪುರುಷರ ಮತ್ತು ಮಹಿಳೆಯರ ಲಾಕಪ್ ಕೊಠಡಿ, ಪುರುಷರ,ಮಹಿಳೆಯರ ಶೌಚಾಲಯದ ವ್ಯವಸ್ಥೆ ಇದೆ. ಮೊದಲನೇ ಮಹಡಿಯಲ್ಲಿ ಪುರುಷರ ವಿಶ್ರಾಂತಿ ಕೊಠಡಿ, ಮಹಿಳೆಯರ ವಿಶ್ರಾಂತಿ ಕೊಠಡಿ, ಪೊಲೀಸ್ ಉಪ ನಿರೀಕ್ಷಕರ ಕೊಠಡಿ, ಗಣಕಯಂತ್ರ ವಿಭಾಗ, ಉಗ್ರಾಣ ಕೊಠಡಿ, ವರ್ಕ್‌ಸ್ಟೇಷನ್,ಪುರುಷರ,ಮಹಿಳೆಯರ ಶೌಚಾಲಯ ಹೊಂದಿದೆ.
೧೬ ಕೋಟಿ ರೂ.ವೆಚ್ಚದ ತರಬೇತಿ ಶಾಲೆ ಆಡಳಿತ ಕಚೇರಿ: ಜ್ಯೋತಿನಗರದಲ್ಲಿ ೧೬ ಕೋಟಿ ರೂ.ವೆಚ್ಚದಲ್ಲಿ ಮೈಸೂರು ನಗರದ ಪೊಲೀಸ್ ತರಬೇತಿ ಶಾಲೆಯ ನೂತನ ಆಡಳಿತ ಕಚೇರಿ ಕಟ್ಟಡ ನಿರ್ಮಾಣ ಮಾಡಿದ್ದು, ನೆಲಮಹಡಿಯಲ್ಲಿ ಲಾಬಿ,ಕಾವಲುಗಾರರ ಕೊಠಡಿ,ಶಸ್ತ್ರಾಸ್ತ್ರಗಳ ಕೊಠಡಿ, ಶಸ್ತ್ರಾಸ್ತ್ರ ಅಧಿಕಾರಿಯ ಕೊಠಡಿ, ಉಗ್ರಾಣ ಕೊಠಡಿ, ಕಾರ್ ಪಾರ್ಕಿಂಗ್,ಮೋಟಾರು ಸಾರಿಗೆ ಕಚೇರಿ, ಮಿನಿ ಬಸ್ ಪಾರ್ಕಿಂಗ್,ಮೊದಲನೇ ಮಹಡಿಯಲ್ಲಿ ಕಾವಲುಗಾರರ ಕೊಠಡಿ, ಆಡಳಿತ ವಿಭಾಗ, ಪ್ರಾಂಶುಪಾಲರ ಕೊಠಡಿ,ಸಮ್ಮೇಳನ ಕೊಠಡಿ, ಡಿಸಿಪಿ,ಎಡಿಪಿ ಕೊಠಡಿ, ಎಆರ್‌ಎಸ್‌ಐ ಕೊಠಡಿ, ಎಎಒ ಕೊಠಡಿ, ಎರಡು ದಾಖಲೆ ಕೊಠಡಿ, ಉಗ್ರಾಣ,ಪುರುಷರ ಶೌಚಾಲಯ ಕೊಠಡಿ,ಎರಡನೇ ಮಹಡಿಯಲ್ಲಿ ಎರಡು ಸಂಖ್ಯೆಯ ಗಣಕಯಂತ್ರ ಕೊಠಡಿ, ಗ್ರಂಥಾಲಯ ಕೊಠಡಿ, ಕಾಮನ್ ಲಾಂಜ್, ಪ್ಯಾಂಟ್ರಿ, ೭೦ ಸಂಖ್ಯೆ ಸಾಮರ್ಥ್ಯವುಳ್ಳ ೮ಸಂಖ್ಯೆಯ ತರಬೇತಿಕೊಠಡಿ, ಸಿಬ್ಬಂದಿಗಳ ಕೊಠಡಿ,ಮೂರನೇ ಮಹಡಿಯಲ್ಲಿ ಸಭಾಂಗಣ, ಕಾಮನ್ ಲಾಂಜ್, ಪ್ಯಾಂಟ್ರಿ, ಉಗ್ರಾಣ ಕೊಠಡಿ, ೯೦ ಸಂಖ್ಯೆ ಸಾಮರ್ಥ್ಯವಿರುವ ಪುರುಷರ ವಿಶ್ರಾಂತಿ ಕೊಠಡಿಯು ಇದೆ. ನಾಲ್ಕನೇ ಮಹಡಿಯಲ್ಲಿ ಧ್ಯಾನ ಸಭಾಂಗಣ ಕೊಠಡಿ, ಕಾಮನ್ ಲಾಂಜ್, ಮಹಿಳೆಯರ ಮತ್ತು ಪುರುಷರ ಶೌಚಾಲಯ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ.
೫೦ ಸದಸ್ಯರ ಬ್ಯಾರಾಕ್ ನೂತನ ಕಟ್ಟಡ: ನಗರದ ಕೆಪಿಎ ಹಳೆಯ ಆವರಣದಲ್ಲಿ ೪.೫೧ ಕೋಟಿ ರೂ.ವೆಚ್ಚದಲ್ಲಿ ೫೦ ಸದಸ್ಯರ ಬ್ಯಾರಾಕ್ ಕಟ್ಟಡವನ್ನು ನಿರ್ಮಿಸಲಾಗಿದೆ. ನೆಲಮಹಡಿಯಲ್ಲಿ ಲಾಬಿ, ಡೈನಿಂಗ್ ಹಾಲ್, ಅಡುಗೆ ಮನೆ ಕೊಠಡಿ, ಉಗ್ರಾಣ ಕೊಠಡಿ, ೧೦ ಅಧಿಕಾರಿಗಳ ಕೊಠಡಿ, ಮೊದಲನೇ ಮಹಡಿಯಲ್ಲಿ ರಿಕ್ರಿಯೇಷನ್ ಹಾಲ್, ಗ್ರಂಥಾಲಯ ಕೊಠಡಿ, ೧೦ ಅಧಿಕಾರಿಗಳ ಕೊಠಡಿ, ಸಾಮಾನ್ಯ ಶೌಚಾಲಯ ಕೊಠಡಿ,ಎರಡನೇ ಮಹಡಿಯಲ್ಲಿ ಮಲ್ಟಿಪರ್ಪಸ್ ಹಾಲ್, ಉಗ್ರಾಣ ಕೊಠಡಿ,ನಾಲ್ಕು ಅಧಿಕಾರಿಗಳ ಕೊಠಡಿಯೊಂದಿಗೆ ಮೂಲ ಸೌಕರ್ಯ ಕಲ್ಪಿಸಲಾಗಿದೆ.
ಮೈಸೂರಿನ ಬನ್ನೂರು ರಸ್ತೆಯಲ್ಲಿರುವ ನೂತನವಾಗಿ ನಿರ್ಮಿಸಿರುವ ಆಲನಹಳ್ಳಿಪೊಲೀಸ್ ಠಾಣೆ ಕಟ್ಟಡವನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ಟೇಪು ಕತ್ತರಿಸಿ ಉದ್ಘಾಟಿಸಿದರು. ಶಾಸಕ ಎಸ್.ಎ.ರಾಮದಾಸ್, ಮಹಾಪೌರ ಶಿವಕುಮಾರ್, ಉಪ ಮಹಾಪೌರರಾದ ಡಾ.ಜಿ.ರೂಪಾ, ಸದಸ್ಯೆ ರಜನಿ ಅಣ್ಣಯ್ಯ,ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಅರುಣ್ ಚಕ್ರವರ್ತಿ, ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಇನ್ನಿತರರು ಹಾಜರಿದ್ದರು
ಮೈಸೂರಿನ ಹೆಬ್ಬಾಳು ರಿಂಗ್ ರಸ್ತೆಯ ಸಮೀಪ ನಿರ್ಮಿಸಿರುವ ಹೆಬ್ಬಾಳ್ ಪೊಲೀಸ್ ಠಾಣೆಯ ನೂತನ ಕಟ್ಟಡವನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ಟೇಪು ಕತ್ತರಿಸಿ ಉದ್ಘಾಟಿಸಿದರು. ಶಾಸಕ ಎಲ್.ನಾಗೇಂದ್ರ,ಮಹಾಪೌರ ಶಿವಕುಮಾರ್ ಇನ್ನಿತರರು ಹಾಜರಿದ್ದರು
ಮೈಸೂರಿನ ಜ್ಯೋತಿನಗರದಲ್ಲಿ ನಿರ್ಮಿಸಿರುವ ಮೈಸೂರು ನಗರದ ಪೊಲೀಸ್ ತರಬೇತಿ ಶಾಲೆಯ ನೂತನ ಆಡಳಿತ ಕಚೇರಿ ಕಟ್ಟಡವನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ಉದ್ಘಾಟಿಸಿದರು.ಡಿಜಿಪಿ ಡಾ.ಪಿ.ರವೀಂದ್ರನಾಥ್, ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಅರುಣ್ ಚಕ್ರವರ್ತಿ, ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲ ಎಚ್.ಟಿ.ಶೇಖರ್ ಇನ್ನಿತರರು ಹಾಜರಿದ್ದರು.
ಮೈಸೂರಿನ ಕೆಪಿಎ ಹಳೆಯ ಆವರಣದಲ್ಲಿ ನಿರ್ಮಿಸಿರುವ ಪತ್ರಾಂಕಿತ ಅಧಿಕಾರಿಗಳ ಮೆಸ್ ಕಟ್ಟಡವನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ಉದ್ಘಾಟಿಸಿದರು. ಕೆಪಿಎ ನಿರ್ದೇಶಕ ಅನುಪಮ್ ಅಗರವಾಲ್,ಉಪ ನಿರ್ದೇಶಕಿ ದಿವ್ಯಾಸಾರಾ ಥಾಮಸ್ ಇನ್ನಿತರರು ಹಾಜರಿದ್ದರು