ಗುಂಡ್ಲುಪೇಟೆ: ಪ್ರಸಿದ್ದ ಯಾತ್ರಾಸ್ಥಳವಾದ ತಾಲ್ಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಇ-ಹುಂಡಿ ಸೇವೆ ಆರಂಭವಾಗಿದೆ.
ದೇವಸ್ಥಾನದಲ್ಲಿ ಇ-ಹುಂಡಿ ಸೇವೆಗೆ ಚಾಲನೆ ನೀಡಿ ಮಾತನಾಡಿ ತಹಶೀಲ್ದಾರ್ ಸಿ.ಜಿ.ರವಿಶಂಕರ್ , ದೇಶವೇ ಡಿಜಿಟಲೀಕರಣ ವಾಗುತ್ತಿರುವ ಸಂದರ್ಭದಲ್ಲಿ ಭಕ್ತರು ಕಾಣಿಕೆ ಸಲ್ಲಿಸಲು ನೆರವಾಗಲಿ ಎಂಬ ಉದ್ದೇಶದಿಂದ ಧಾರ್ಮಿಕ ಸ್ಥಳ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಇ-ಹುಂಡಿ ಸೇವೆಯನ್ನು ಎಸ್ ಬಿಐ ಸಹಭಾಗಿತ್ವದಲ್ಲಿ ಆರಂಭಿಸಲಾಗಿದೆ ಎಂದರು.
ಭಕ್ತರು ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಇ-ಹುಂಡಿಗೆ ಹಣ ಸಲ್ಲಿಸಬಹುದಾಗಿದೆ. ಭಕ್ತರು ತಾವು ಕುಳಿತ ಸ್ಥಳದಲ್ಲೇ ದೇವಸ್ಥಾನಕ್ಕೆ ಹಣ ಜಮಾ ಮಾಡಲು ನೆರವಾಗುವ ಉದ್ದೇಶದಿಂದ ಇ-ಹುಂಡಿ ಆರಂಭ ಮಾಡಲಾಗಿದ್ದು, ಇನ್ನು ಮುಂದೆ ಜನರು ದೇವಸ್ಥಾನದ ಗೋಲಕಕ್ಕೆ ಹಣ ನೀಡುವ ಬದಲು ಇ-ಹುಂಡಿಗೆ ಗೂಗಲ್ ಪೇ, ಫೋನ್ ಪೇ, ಭೀಮ್ ಆ್ಯಪ್, ಪೇಟಿಎಂ ಮೂಲಕ ಹಣ ಹಾಕಬಹುದು ಎಂದು ತಿಳಿಸಿದರು.