Mysore
23
scattered clouds

Social Media

ಗುರುವಾರ, 27 ಮಾರ್ಚ್ 2025
Light
Dark

helping hands jain organizations ವತಿಯಿಂದ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಾಗ್ರಿ ವಿತರಣೆ

ಮೈಸೂರು : ನಗರದ ಇಟ್ಟಿಗೆಗೂಡಿನಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿಂದು helping hands jain organizations   ಸದಸ್ಯರುಗಳು ಇಂದು ಶಾಲೆಯ  ವಿದ್ಯಾರ್ಥಿಗಳಿಗೆ ಬಿಳಿಸಮವಸ್ತ್ರ, ನೋಡ್ ಬುಕ್, ಶೂ, ಪ್ಯಾಡ್ ಸೇರಿದಂತೆ ಹಲವು ಕಲಿಕಾ ಸಾಮಾಗ್ರಿಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಾಮಚಂದ್ರ ರಾಜೇ ಅರಸ್ ಅವರು ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು, ಸರ್ಕಾರಿ ಶಾಲೆಗಳ ಬಲವರ್ಧನೆ ಗೆ ಸರ್ಕಾರ ಹಲವು ರೀತಿಯ ಕ್ರಮ ವಹಿಸಿದೆ. ಇಂತಹ ಸಂದರ್ಭದಲ್ಲಿ ಜಿಲ್ಲೆಯಲ್ಲಿಯೂ ಶಾಲೆಗಳ ಉನ್ನತಿಗೆ ಹಂತ ಹಂತವಾಗಿ ಕ್ರಮ ವಹಿಸಲಾಗುತ್ತಿದೆ ಎಂದರು. ಮುಂದುವರಿದು ಸಂಘ-ಸಂಸ್ಥಗಳು ನೀಡುತ್ತಿರುವ ನೆರವಿನಿಂದಾಗಿ ರಾಜ್ಯದ ಹಲವೆಡೆ ಸರ್ಕಾರಿ ಶಾಲೆಗಳು ಉಳಿದು ಕೊಂಡಿವೆ. ಇಂತಹ ಕಾರ್ಯ ನಿರಂತರವಾಗಿ ಇರಬೇಕು ಎಂದು ಆಶಿಸಿದರು.

ಬಳಿಕ ಮಾತನಾಡಿದ ದಕ್ಷಿಣ ವಲಯ ಬಿಇಒ ರಾಮಾರಾಧ್ಯ  ಅವರು ಇಟ್ಟಿಗೆಗೂಡು ಸರ್ಕಾರಿ ಶಾಲೆ ಮಾದರಿಯಾಗಿದೆ. ಖಾಸಗಿ ಶಾಲೆಗಳಲ್ಲಿ ಸಿಗುತ್ತಿರುವ ಸೌಲಭ್ಯ ಈ ಶಾಲೆಯಲ್ಲೂ ದೊರಕುತ್ತಿದೆ. ಗುಣಮಟ್ಟ ಶಿಕ್ಷಣಕ್ಕೆ ಇಲ್ಲಿ ಒತ್ತು ನೀಡಲಾಗುತ್ತಿದ್ದು, ಒಳ್ಳೆಯ ಬೆಳವಣಿಗೆ ಎಂದರು. ಮುಖ್ಯ ಶಿಕ್ಷಕ ‌ಮಾಲಂಗಿ ಸುರೇಶ್ ಮಾತನಾಡಿ ಮಕ್ಕಳ ‌ಶೈಕ್ಷಣಿಕ ಅಭಿವೃದ್ಧಿಗೆ ಡಿಡಿಪಿಐ ಆದ್ಯತೆ ನೀಡುತ್ತಿದ್ದು, ಶಾಲೆ ಪ್ರಗತಿಗೆ ಶ್ರಮಿಸುತ್ತಿದ್ದಾರೆ. ಪ್ರತಿ ವರ್ಷ ಮಕ್ಕಳಿಗೆ ಅಗತ್ಯವಿರುವ ಕಲಿಕಾ ಸಾಮಗ್ರಿ ಮತ್ತು ಪರಿಕರಗಳನ್ನು ಹೆಲ್ಪಿಂಗ್ಸ್ ಹ್ಯಾಂಡ್ಸ್ ಸಂಸ್ಥೆ ನೀಡುತ್ತಿದೆ ಎಂದರು.

ಈ ಸಂದರ್ಭದಲ್ಲಿ ಆರ್ಗನೈಸೇಷನ್ ಪದಾಧಿಕಾರಿಗಳಾದ ರಾಜನ್ ಬಾಗ್ಮಾರ್, ಮಹಾವೀರ್ ಕಬಿಯಾ, ಆನಂದ್ ಪಟ್ವಾರ್ , ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸೋಮೇಗೌಡ, ಡಯೆಟ್ ಉಪನ್ಯಾಸಕಿ ಜಯಂತಿ, ಗ್ರಾಮ ಲೆಕ್ಕಿಗರ ಸಂಘದ ಜಿಲ್ಲಾಧ್ಯಕ್ಷ ನಾಗೇಶ್  ಇತರರು ಉಪಸ್ಥಿತರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ