ಹಾಸನ : ಹಾಸನ ಮೂಲದ ಯುವ ಜನರು ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಸರಣಿ ಮುಂದುವರೆದಿದ್ದು, ನಿನ್ನೆ(ಜೂ.25) ಹಾಸನ ಮೂಲದ ಯುವಕ ಹೃದಯಾಘಾತದಿಂದ ಸಾವನ್ನಪ್ಪಿದ್ದರೆ, ಇಂದು ಮತ್ತೋರ್ವ ಹಾಸನ ಮೂಲದ ಯುವತಿ ಬೆಂಗಳೂರಿನಲ್ಲಿ ಹೃದಯಾಘಾತಕ್ಕೆ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯ ಯುವಕ-ಯುವತಿ ಒಂದೇ ತಿಂಗಳಲ್ಲಿ ಹೃದಯಾಘಾತಕ್ಕೆ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.
ಆಟೋ ಚಾಲಕ ಸಾವು
ಹಾಸನದ ಚನ್ನರಾಯಪಟ್ಟಣ ತಾಲೂಕಿನ ಹೊನ್ನೇನಹಳ್ಳಿ ಗ್ರಾಮದ 32 ವರ್ಷದ ಯೋಗೇಶ್ ಬೆಂಗಳೂರಿನಲ್ಲಿ ನಿನ್ನೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಬೆಳಿಗ್ಗೆ ಆಟೋ ಓಡಿಸಿ ಮನೆಗೆ ಬಂದು ಮಲಗಿದ್ದಾರೆ. ಹೀಗಿದ್ದಾಗ ಮಲಗಿದ್ದಲ್ಲಿಯೇ ಸಾವನ್ನಪ್ಪಿದ್ದಾನೆ. ಬಳಿಕ ಆಸ್ಪತ್ರೆಗೆ ಕರೆದೊಯ್ದಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಖಚಿತಪಡಿಸಿದ್ದಾರೆ.
22 ವರ್ಷದ ಯುವತಿ ಹೃದಯಾಘಾತಕ್ಕೆ ಬಲಿ
ಹಾಸನ ಮೂಲದ ಕಟ್ಟಳ್ಳಿಯ ಯುವತಿ ರೂಪ(22) ಬೆಂಗಳೂರಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. ಬೆಂಗಳೂರಿನಲ್ಲಿ ವಾಸವಿರುವ ಯುವತಿ ನಿನ್ನೆ ಮನೆಯಲ್ಲಿಯೇ ಇದ್ದಳು. ಈ ವೇಳೆ ಸುಪ್ರಿಯಾಗೆ ಏಕಾಏಕಿ ಎದೆನೋವು ಕಾಣಿಸಿಕೊಂಡು ಕುಸಿದುಬಿದ್ದಿದ್ದಾಳೆ. ಕೂಡಲೇ ಪೋಷಕರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ವೈದ್ಯರು ಸುಪ್ರಿಯಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ಖಚಿತಪಡಿಸಿದ್ದಾರೆ.





