ಹಾಸನ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಕ್ರಮ ಪ್ರಕರಣದಲ್ಲಿ ಮೊದಲ ವಿಕೆಟ್ ಪತನವಾಗಿದ್ದು, ಈ ಹಿಂದಿನ ಮುಡಾ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಅವರನ್ನು ನಿನ್ನೆ ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕೆಎಎಸ್ ಅಧಿಕಾರಿ ದಿನೇಶ್ ಕುಮಾರ್ ಮೇಲೆ ಮುಡಾ ಅಕ್ರಮ ಕುರಿತು ಅನೇಕ ಆರೋಪಗಳಿವೆ ಎನ್ನುವ ಕಾರಣಕ್ಕೆ ಅಮಾನತು ಮಾಡಲಾಗಿದೆ.
ಸದ್ಯ ಈ ಅಮಾನತು ಪ್ರಕರಣದ ಬಗ್ಗೆ ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಶಿವಲಿಂಗೇಗೌಡ ಅವರು, ಮುಡಾದಲ್ಲಿ ತಪ್ಪು ಮಾಡಿದ್ದಕ್ಕೆ ದಿನೇಶ್ ಕುಮಾರ್ ಅಮಾನತು ಮಾಡಲಾಗಿದೆ. ದಿನೇಶ್ ಅವರ ಅಮಾನತು ಸರಿಯಾಗಿದೆ ಎಂದರು.
ಇನ್ನು ಮುಡಾ ಹಗರಣದ ಬಗ್ಗೆ ಮಾತನಾಡಿದ ಅವರು, ಮುಡಾ ಕೇಸ್ ವಾದಕ್ಕೆ ನನ್ನನ್ನು ಬಿಡಿ. ಆ ಕೇಸನ್ನು ನಾನು ಗೆದ್ದೇ ಗೆಲ್ಲುತ್ತೇನೆ. ಒಂದು ವೇಳೆ ಗೆಲ್ಲದಿದ್ದರೆ ನಿಮ್ಮ ಮನೆ ಜೀತ ಮಾಡ್ತೀನಿ ಎಂದರು.