Mysore
15
overcast clouds

Social Media

ಬುಧವಾರ, 11 ಫೆಬ್ರವರಿ 2026
Light
Dark

ಹಾಸನಾಂಬೆ ದರ್ಶನದ ಬಗ್ಗೆ ಸಚಿವ ಕೃಷ್ಣಭೈರೇಗೌಡ ಮಹತ್ವದ ಮಾಹಿತಿ: ಏನದು ಗೊತ್ತಾ?

ಹಾಸನ: ಹಾಸನಾಂಬೆ ದೇವಿ ದರ್ಶನದ ಬಗ್ಗೆ ಜಿಲ್ಲಾ ಉಸ್ತುವಾರಿ ಹಾಗೂ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಮಹತ್ವದ ಮಾಹಿತಿ ನೀಡಿದ್ದು, ಬುಧವಾರ ಸಂಜೆ 7 ಗಂಟೆಯವರೆಗೆ ಮಾತ್ರ ದರ್ಶನಕ್ಕೆ ಅವಕಾಶ ಇರಲಿದೆ ಎಂದು ತಿಳಿಸಿದ್ದಾರೆ.

ದೈನಂದಿನ ಮಾಹಿತಿ ನೀಡಿರುವ ಸಚಿವರು, ದೀಪಾವಳಿ ವಿಶೇಷ ಪೂಜೆ ನೈವೇದ್ಯಗಳು ಹಾಗೂ ಇತರ ಅಲಂಕಾರಗಳ ಕಾರಣಕ್ಕಾಗಿ ಕೆಲವು ಸಂದರ್ಭಗಳಲ್ಲಿ ದೇವಸ್ಥಾನದ ಬಾಗಿಲುಗಳನ್ನು ಮುಚ್ಚಲಾಗಿದೆ ಎಂದು ವಿವರಿಸಿದ್ದಾರೆ.

ಸೋಮವಾರ ಬೆಳಗ್ಗೆಯೂ ಹಾಸನಾಂಬ ದರ್ಶನ ಸುಗಮವಾಗಿ ನಡೆದಿದೆ. ಪೂಜಾ ಕಾರ್ಯಕ್ರಮದ ಕಾರಣ ಸೋಮವಾರ ಹಾಗೂ ಮಂಗಳವಾರ ಮಧ್ಯಾಹ್ನ 2 ರಿಂದ 3.30 ಗಂಟೆಯ ನಡುವೆ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ಇದನ್ನು ಓದಿ:ಹಬ್ಬದ ದಿನವೂ ಹಾಸನಾಂಬೆ ದರ್ಶನಕ್ಕೆ ಹರಿದು ಬಂದ ಜನಸಾಗರ 

ಮಂಗಳವಾರ ದೀಪಾವಳಿ ವಿಶೇಷ ಪೂಜೆಯ ಕಾರಣಕ್ಕೆ ರಾತ್ರಿ 9 ಗಂಟೆಗೆ ಸಾರ್ವಜನಿಕ ದರ್ಶನದ ಬಾಗಿಲುಗಳನ್ನು ಮುಚ್ಚಲಾಗುತ್ತದೆ. ಬುಧವಾರ ಬೆಳಗಿನ ಜಾವ 5.30ಕ್ಕೆ ಪೂಜೆ ಮುಗಿಸಿ ಮತ್ತೆ ದರ್ಶನ ಆರಂಭವಾಗುತ್ತದೆ ಎಂದು ಹೇಳಿದ್ದಾರೆ.

ಕೊನೆಯ ದಿನವಾದ ಬುಧವಾರ ಸಂಜೆ 7 ಗಂಟೆಯವರೆಗೆ ಮಾತ್ರ ದರ್ಶನಕ್ಕೆ ಅವಕಾಶವಿರುತ್ತದೆ. ಅದೇ ದಿನ ಸಂಜೆ ಸಿದ್ದೇಶ್ವರ ಸ್ವಾಮಿಯ ಜಾತ್ರೆ ಇದೆ. ಗುರುವಾರ ಮಧ್ಯಾಹ್ನ ಶಾಸ್ತ್ರದ ಪ್ರಕಾರ ಪೂಜೆ ನೆರವೇರಿಸಿ ಮುಂದಿನ ವರ್ಷದವರೆಗೆ ದೇವಾಲಯದ ಬಾಗಿಲನ್ನು ಮುಚ್ಚಲಾಗುತ್ತದೆ. ಆದರೆ, ಈ ದಿನ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಭಕ್ತಾಧಿಗಳು ಈ ಸಮಯಕ್ಕೆ ಅನುಗುಣವಾಗಿ ತಮ್ಮ ದೇವಾಲಯದ ಭೇಟಿಯನ್ನು ಯೋಜಿಸಿಕೊಳ್ಳಬೇಕಾಗಿ ಮನವಿ ಮಾಡಿದ್ದಾರೆ.

Tags:
error: Content is protected !!