ಹಾಸನ : ಹಾಸನಾಂಬೆ ದರ್ಶನದ ವೇಳೆ ಕರ್ತವ್ಯ ಲೋಪ ಆರೋಪದ ಮೇಲೆ ಆರು ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿದೆ.
ಇಬ್ಬರು ಸಮಾಜ ಕಲ್ಯಾಣ ಹಾಗೂ ನಾಲ್ವರು ಕಂದಾಯ ಇಲಾಖೆ ಸಿಬ್ಬಂದಿ ಅಮಾನತು ಮಾಡಲಾಗಿದೆ. ಗುರುತಿನ ಚೀಟಿ ದುರುಪಯೋಗದ ಆರೋಪದ ಮೇರೆಗೆ ಸಮಾಜ ಕಲ್ಯಾಣ ಇಲಾಖೆಯ ವಾರ್ಡನ್ ಗಳಾದ ರಮೇಶ್ ಮತ್ತು ಆನಂದ್ ಎಂಬ ಇಬ್ಬರು ಸಿಬ್ಬಂದಿಯನ್ನು ಜಿಲ್ಲಾಧಿಕಾರಿ ಕೆಎಸ್ ಲತಾ ಅಮಾನತುಗೊಳಿಸಿದ್ದಾರೆ.
ಇದನ್ನು ಓದಿ : ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ ; 2 ಕೋಟಿ ಆದಾಯ
ಇದು ಸ್ಪಷ್ಟ ನಿಯಮ ಉಲ್ಲಂಘನೆಯಾಗಿದೆ. ಸರ್ಕಾರದ ಗುರುತಿನ ಚೀಟಿಯನ್ನು ಬೇರೆಯವರಿಗೆ ನೀಡುವುದು ಗಂಭೀರ ಅಪರಾಧವಾಗಿದೆ. ಅವರ ಐಡಿ ಕಾರ್ಡ್ ನಲ್ಲಿ ಬೇರೆಯವರು ದೇವಾಲಯ ಪ್ರವೇಶಿಸಲು ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದರು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಅಲ್ಲದೇ ಗೋಲ್ಡ್ ಕಾರ್ಡ್ ಕೌಂಟರ್ ನಲ್ಲಿ ಕಾರ್ಡ್ ಸ್ಕ್ಯಾನ್ ಮಾಡದೇ ಭಕ್ತರನ್ನು ಒಳಗಡೆ ಬಿಡಲಾಗಿದೆ ಎಂದು ಆರೋಪದ ಮೇಲೆ ನಾಲ್ವರು ಕಂದಾಯ ಇಲಾಖೆ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಆರ್ ಐಗಳಾದ ಗೋವಿಂದ ರಾಜ್, ಯೋಗಾನಂದ್ ಮತ್ತು ಲೆಕ್ಕಾಧಿಕಾರಿಗಳಾದ ಸಂತೋಷ್ ಅಂಬಿಗರ, ಶಿರಾಜ್ ಮಹಿಮಾ ಪಟೇಲ್ ಅವರನ್ನು ತಕ್ಷಣದಿಂದ ಅಮಾನತು ಮಾಡುವಂತೆ ಜಿಲ್ಲಾಧಿಕಾರಿ ಲತಾ ಕುಮಾರಿ ಆದೇಶಿಸಿದ್ದಾರೆ. ಅಕ್ಟೋಬರ್ 23 ರಂದು ದೇವಿಯ ದರ್ಶನ ಮುಕ್ತಾಯವಾಗಲಿದೆ.





