ಹಾಸನ: ಹಾಸನಾಂಬೆ ದೇವಿ ದರ್ಶನ ಮತ್ತು ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಬೆಳಿಗ್ಗೆ ನಡೆದ ಕೊಂಡೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಲತಾಕುಮಾರಿ ಅವರು ಕೆಂಡ ಹಾಯ್ದು ಎಲ್ಲರ ಗಮನ ಸೆಳೆದರು.
ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವವು ಭಕ್ತಿ, ಭಾವನಾಭರಿತ ವಾತಾವರಣದಲ್ಲಿ ಅದ್ಧೂರಿಯಾಗಿ ನೆರವೇರಿತು. ಬೆಳಗಿನ ಜಾವದಿಂದಲೇ ದೇವಾಲಯ ಆವರಣದಲ್ಲಿ ಭಕ್ತರ ದೊಡ್ಡ ಜನಸಂದಣಿ ಕಂಡುಬಂತು.
ಇದನ್ನು ಓದಿ: ದೀಪಾವಳಿ ಹಬ್ಬದ ದಿನವೂ ಹಾಸನಾಂಬೆ ದರ್ಶನಕ್ಕೆ ಹರಿದು ಬಂದ ಜನಸಾಗರ
ಭಕ್ತರು ಕೆಂಡದ ಮೇಲೆ ನಡಿದು ತಾಯಿಯ ಕೃಪೆಗಾಗಿ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ವಿಶೇಷವಾಗಿ ಜಿಲ್ಲಾಧಿಕಾರಿಗಳು ಕೆಂಡವನ್ನು ತುಣಿದರು. ಧಾರ್ಮಿಕ ಭಾವನೆ, ನಂಬಿಕೆ ಮತ್ತು ಪರಂಪರೆಯ ಸಂಯೋಜನೆಯ ಈ ವೈಭವಶಾಲಿ ಕೆಂಡೋತ್ಸವವನ್ನು ನೋಡುವ ಸಲುವಾಗಿ ಸಾವಿರಾರು ಭಕ್ತರು ಹಾಸನಾಂಬೆ ದೇವಾಲಯಕ್ಕೆ ಆಗಮಿಸಿದ್ದರು. ಪೊಲೀಸ್ ಇಲಾಖೆ ಹಾಗೂ ಆಡಳಿತದಿಂದ ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು.





