Mysore
24
overcast clouds

Social Media

ಗುರುವಾರ, 01 ಜನವರಿ 2026
Light
Dark

ಇನ್ಮುಂದೆ ಭೀಮನ ಹತ್ತಿರ ಹೋಗಿ ವೀಡಿಯೋ, ಫೋಟೋ ತೆಗೆದರೆ ಬೀಳುತ್ತೆ ಕೇಸ್‌

ಹಾಸನ: ಹಾಸನ ಜಿಲ್ಲೆಯ ಮಲೆನಾಡು ಭಾಗದ ಗ್ರಾಮಗಳಿಗೆ ಕಾಡಾನೆ ಭೀಮು ಎಂಟ್ರಿ ಕೊಡುತ್ತಿದೆ. ಶಾಂತ ಸ್ವಭಾವದ ಭೀಮನನ್ನು ನೋಡಲು ಜನರು ಮುಗಿಬೀಳುತ್ತಿದ್ದಾರೆ. ಅಲ್ಲದೇ ಫೋಟೋ ತೆಗೆಯಲು, ವೀಡಿಯೋ ಮಾಡಲು ಮುಂದಾಗುತ್ತಿದ್ದಾರೆ. ಜನರ ನಡೆಯಿಂದ ಆನೆಗೆ ತೊಂದರೆ ಆಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕ್ರಮಕ್ಕೆ ಮುಂದಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಡಿಎಫ್‌ಓ ಸೌರಬ್‌ ಕುಮಾರ್‌ ಅವರು ಕಾಡಾನೆ ಭೀಮ ಗ್ರಾಮ ಹಾಗೂ ತೋಟಗಳಿಗೆ ಬರುತ್ತಿದೆ. ಇಟಿಎಫ್‌ ತಂಡ 24 ಗಂಟೆಗಳ ಕಾಲ ಕಾಡಾನೆ ಭೀಮನನ್ನು ಗಮನಿಸುತ್ತಿದೆ. ಈಗಾಗಲೇ ಸಾರ್ವಜನಿಕರಿಗೆ ವಿನಂತಿ ಮಾಡಿ ಎಚ್ಚರಿಕೆ ಕೊಡಲಾಗಿದೆ. ಸೆಕ್ಷನ್‌ 216, ವೈಲ್ಡ್‌ ಲೈಫ್‌ ಪ್ರೊಟೆಕ್ಷನ್‌ ಆಕ್ಟ್‌ 19/70 ಪ್ರಕಾರ ಪ್ರಾಣಿಗಳಿಗೆ ತೊಂದರೆ ನೀಡುವುದು ಅಪರಾಧವಾಗಿದೆ ಎಂದು ತಿಳಿಸಿದ್ದಾರೆ.

ದಯವಿಟ್ಟು ಕಾಡು ಪ್ರಾಣಿಗಳ ಹತ್ತಿರ ಯಾರೂ ಹೋಗಬಾರದು. ನಿಮ್ಮ ಪ್ರಾಣವನ್ನು ನೀವೇ ರಕ್ಷಣೆ ಮಾಡಿಕೊಳ್ಳಬೇಕಿದೆ. ಕಾಡು ಪ್ರಾಣಿ ಕಾಡು ಪ್ರಾಣಿನೇ. ಹೀಗಾಗಿ ಜನ ಅನಾವಶ್ಯಕವಾಗಿ ಆನೆಗೆ ತೊಂದರೆ ಕೊಡಬಾರದು. ಇನ್ನು ಮುಂದೆ ಭೀಮನ ಸಮೀಪ ಹೋಗಿ ವಿಡಿಯೋ ಚಿತ್ರೀಕರಣ ಮಾಡಿದರೆ ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

Tags:
error: Content is protected !!