Mysore
20
overcast clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಚಾಮುಂಡೇಶ್ವರಿ ತಾಯಿಯೇ ನನನ್ನು ಕರೆಸಿಕೊಂಡಿದ್ದಾರೆ : ದಸರಾ ಉದ್ಘಾಟಕಿ ಬಾನು ಮುಷ್ತಾಕ್‌

ಹಾಸನ : ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಬೂಕರ್‌ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್‌ ಅವರನ್ನು ಸರ್ಕಾರ ಆಯ್ಕೆ ಮಾಡಿದೆ. ಸದ್ಯ ಈ ಬಗ್ಗೆ ಕಳೆದೆರಡು ದಿನದಿಂದ ಪರ-ವಿರೋಧ ಚರ್ಚೆಗಳು ಹುಟ್ಟಿಕೊಂಡಿವೆ. ಬಿಜೆಪಿ ದಸರಾ ಧಾರ್ಮಿಕ ಹಬ್ಬ ಹೀಗಾಗಿ ಅವರ ಆಯ್ಕೆ ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಡಿಸಿದರೆ, ದಸರಾ ನಾಡಹಬ್ಬ, ಜಾತ್ಯಾತೀತ ಹಬ್ಬವಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಈ ನಡುವೆ ಸ್ವತಃ ಬಾನು ಮುಷ್ತಕ್‌ ಅವರೇ ಮಾತನಾಡಿದ್ದಾರೆ.

ಹಾಸನದಲ್ಲಿ ಮಾತನಾಡಿರುವ ಅವರು, ಅಂತರರಾಷ್ಟ್ರೀಯ ಬೂಕರ್‌ ಪ್ರಶಸ್ತಿ ನಾನು ಬಯಸದೇ ನಮ್ಮ ಶ್ರಮಕ್ಕೆ ಒಲಿದಿದೆ. ಇದೇ ರೀತಿ ರಾಜ್ಯ ಸರ್ಕಾರದ ದಸರಾ ಉದ್ಘಾಟನೆಗೆ ಆಯ್ಕೆ ಮಾಡಿದೆ. ಈ ಮಮತೆಯ ಕರೆಯೋಲೆಗೆ ನಾನು ಆಭಾರಿಯಾಗಿದ್ದಾನೆ. ಈ ಬಗ್ಗೆ ನನಗೆ ಅಪರಾವಾದ ಗೌರವವಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ನಾನು ಕಳೆದ ಬಾರಿ ಮೈಸೂರಿಗೆ ಭೇಟಿ ನೀಡಿದ್ದ ವೇಳೆ ಹಲವಾರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ, ಅದೇ ರೀತಿ ಚಾಮುಂಡೇಶ್ವರಿ ತಾಯಿಯ ಆರ್ಶಿವಾದ ಪಡೆಯಲು ಕಳೆದ ಬಾರಿ ನನ್ನ ಸ್ನೇಹಿತೆ ಆಹ್ವಾನಿಸಿದ್ದರು. ಕಾರ್ಯಕ್ರಮ ನಿಮಿತ್ತ ಹೋಗಲು ಆಗಲಿಲ್ಲ. ಸದ್ಯದಲ್ಲೇ ಮೈಸೂರಿಗೆ ಬರುತ್ತೇನೆ ತಾಯಿಯ ಆರ್ಶಿವಾದ ಪಡೆಯುತ್ತೇನೆ ಎಂದಿದ್ದೆ. ಹೀಗಾಗಿ ಇದೀಗ ಚಾಮುಂಡೇಶ್ವರಿ ತಾಯಿಯೇ ನನ್ನನ್ನು ಕರೆಸಿಕೊಂಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

Tags:
error: Content is protected !!