Mysore
22
overcast clouds
Light
Dark

ಅರ್ಧ ಗಂಟೆಯಲ್ಲಿ 1 ಲೀಟರ್ ಮದ್ಯ ಕುಡಿಯುವ ಚಾಲೆಂಜ್ : ಓರ್ವ ಸಾವು

ಹಾಸನ : ಇಬ್ಬರು ವ್ಯಕ್ತಿಗಳ ನಡುವೆ ಮದ್ಯ ಕುಡಿಯುವ ಸ್ಪರ್ಧೆ ನಡೆದು ಮಿತಿ ಮೀರಿ ಕುಡಿದ ಓರ್ವ ವ್ಯಕ್ತಿ ಮೃತಪಟ್ಟ ಘಟನೆ ಹೊಳೆನರಸೀಪುರದ ಸಿಗರನಹಳ್ಳಿಯಲ್ಲಿ ನಡೆದಿದೆ.

ಒಂದೇ ಗ್ರಾಮದ ಇಬ್ಬರು ವ್ಯಕ್ತಿಗಳ ನಡುವೆ ಅರ್ಧ ಗಂಟೆಯಲ್ಲಿ ಒಂದು ಲೀಟರ್ ಮದ್ಯ ಕುಡಿಯುವ ಸ್ಪರ್ಧೆ ಏರ್ಪಟ್ಟಿದೆ. ಸ್ಪರ್ಧೆಯಲ್ಲಿ ಹೆಚ್ಚು ಮದ್ಯ ಸೇವನೆ ಮಾಡಿದ ತಿಮ್ಮೇಗೌಡ (60) ಎಂಬಾತ ಸಾವಿಗೀಡಾಗಿದ್ದಾರೆ. ಮೃತ ತಿಮ್ಮೇಗೌಡ ಹಾಗೂ ದೇವರಾಜ ನಡುವೆ ಈ ಸ್ಪರ್ಧೆ ಏರ್ಪಟ್ಟಿತ್ತು. ಈ ಇಬ್ಬರಿಗೂ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಕೃಷ್ಣೇಗೌಡ ಮದ್ಯದ ಪ್ಯಾಕೆಟ್‍ಗಳನ್ನು ನೀಡಿದ್ದರು ಎನ್ನಲಾಗಿದೆ.

ತಿಮ್ಮೇಗೌಡನಿಗೆ ಮದ್ಯ ವಿಪರೀತವಾಗುತ್ತಿದ್ದಂತೆ ಬಾಯಲ್ಲಿ ರಕ್ತ ಬರಲಾರಂಭಿಸಿದೆ. ಬಳಿಕ ದೇವರಾಜು ಮತ್ತು ಕೃಷ್ಣೇಗೌಡ ಸ್ಥಳದಿಂದ ಪರಾರಿಯಾಗಿದ್ದಾರೆ. ನಂತರ ಅಸ್ವಸ್ಥವಾಗಿ ಬಿದ್ದಿದ್ದ ಆತನನ್ನು ಗ್ರಾಮಸ್ಥರು ಎತ್ತಿಕೊಂಡು ಬಂದು ಮನೆಯಲ್ಲಿ ಮಲಗಿಸಿದ್ದರು. ಈ ವೇಳೆ ತಿಮ್ಮೇಗೌಡ ಸಾವಿಗೀಡಾಗಿದ್ದಾರೆ.

ಈ ಸಂಬಂಧ ತಿಮ್ಮೇಗೌಡನ ಪುತ್ರಿ, ದೇವರಾಜು ಹಾಗೂ ಕೃಷ್ಣೇಗೌಡನ ವಿರುದ್ಧ ದೂರು ದಾಖಲಿಸಿದ್ದಾರೆ. ಅಲ್ಲದೇ ಅಕ್ರಮ ಮದ್ಯ ಮಾರಟಕ್ಕೆ ಕಡಿವಾಣ ಹಾಕುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ