Mysore
23
overcast clouds

Social Media

ಶುಕ್ರವಾರ, 10 ಏಪ್ರಿಲ 2026
Light
Dark

ಚಿತ್ರದುರ್ಗದಲ್ಲಿ ಬಸ್‌ ಅಪಘಾತ ಪ್ರಕರಣ: ಹಾಸನ ಮೂಲದ ಇಬ್ಬರು ಟೆಕ್ಕಿಗಳು ಕಣ್ಮರೆ

ಹಾಸನ: ಚಿತ್ರದುರ್ಗ ಜಿಲ್ಲೆ ಹಿರಿಯೂರು ಬಳಿ ಸಂಭವಿಸಿದ ಭೀಕರ ಬಸ್‌ ಅಪಘಾತದಲ್ಲಿ ಹಾಸನದ ಚನ್ನರಾಯಪಟ್ಟಣ ಮೂಲದ ಇಬ್ಬರು ಯುವತಿಯರು ಕಣ್ಮರೆಯಾಗಿದ್ದಾರೆ.

ಚನ್ನರಾಯಪಟ್ಟಣ ತಾಲ್ಲೂಕಿನ ಅಂಕನಹಳ್ಳಿಯ ನವ್ಯ ಹಾಗೂ ಚನ್ನರಾಯಪಟ್ಟಣ ನಗರದ ಮಾನಸ ಎಂಬುವವರೇ ಕಣ್ಮರೆಯಾಗಿರುವ ದುರ್ದೈವಿಗಳಾಗಿದ್ದಾರೆ.

ಇಬ್ಬರು ಹಾಸನ ನಗರದ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಇಂಜಿನಿಯರಿಂಗ್‌ ಮುಗಿಸಿದ್ದರು. ಬಳಿಕ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದರು.

ಬೆಂಗಳೂರಿನಿಂದ ಬುಧವಾರ ಸ್ನೇಹಿತೆ ಮಿಲನ ಜೊತೆ ಬಸ್‌ ಹತ್ತಿ ಹೊರಟಿದ್ದರು. ಮಿಲನ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ಇಬ್ಬರು ಕಣ್ಮರೆಯಾಗಿದ್ದಾರೆ.

Tags:
error: Content is protected !!