ಹಾಸನ: ಹಾಸನದಲ್ಲಿ ನಡೆಯುತ್ತಿರುವ ಹಾಸನಾಂಬ ಹಾಗೂ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಕೂಡ ಜನಸಾಗರವೇ ಹರಿದುಬಂದಿದೆ.
ಇಂದು ಬೆಳಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತು ಭಕ್ತರು ದೇವರ ದರ್ಶನ ಪಡೆಯುತ್ತಿದ್ದು, ನಿಗದಿತ ಅವಧಿಯಲ್ಲಿ ಗಣ್ಯರು ಕೂಡ ಆಗಮಿಸಿ ದೇವರ ಪಡೆದು ಪುನೀತರಾದರು.
ಶುಕ್ರವಾರದಿಂದ ಆರಂಭವಾದ ಹಾಸನಾಂಬ ಹಾಗೂ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ಅಪಾರ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವುದರಿಂದ ಕೇವಲ ಮೂರೇ ದಿನಗಳಲ್ಲಿ 2 ಕೋಟಿಗೂ ಅಧಿಕ ಆದಾಯ ದಾಖಲಿಸಿದೆ. ವಿಶೇಷ ದರ್ಶನ ಸೇರಿದಂತೆ ಲಾಡು ಪ್ರಸಾದದಲ್ಲಿ ಅಧಿಕ ಆದಾಯ ಗಳಿಸಿದೆ. ಅಕ್ಟೋಬರ್.23ರಂದು ಹಾಸನಾಂಬ ದೇವಿಯ ದರ್ಶನ ಮುಕ್ತಾಯವಾಗಲಿದೆ.





