Mysore
34
scattered clouds

Social Media

ಗುರುವಾರ, 27 ಮಾರ್ಚ್ 2025
Light
Dark

ಶೀಘ್ರದಲ್ಲೇ ಹನೂರು ಕ್ಷೇತ್ರದಲ್ಲಿ 12 ಪದವಿ ಪೂರ್ವ ಕಾಲೇಜುಗಳು ಆರಂಭ : ಶಾಸಕ ಆರ್‌. ನರೇಂದ್ರ

ಹನೂರು: ಮುಂದಿನ ವರ್ಷದಿಂದ ಹನೂರು ಕ್ಷೇತ್ರದಲ್ಲಿ 12 ಪದವಿ ಪೂರ್ವ ಕಾಲೇಜುಗಳು ಪ್ರಾರಂಭವಾಗಲಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಶಾಸಕ ಆರ್.ನರೇಂದ್ರ ತಿಳಿಸಿದರು.

ಹನೂರಿನ ಜಿ.ವಿ ಗೌಡ ಸರ್ಕಾರಿ ಪ್ರಥಮ ದರ್ಜೇ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಾಂಸ್ಕøತಿಕ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಳೆದ ದಶಕದ ಹಿಂದೆ ಹನೂರಿನಲ್ಲಿ ಪ್ರಥಮ ದರ್ಜೇ ಕಾಲೇಜನ್ನು ತೆರೆಯಲಾಗಿತ್ತು. ಆದರೆ ವಿದ್ಯಾರ್ಥಿ ನಿಲಯ ಇಲ್ಲದ ಪರಿಣಾಮ ಕಾಲೇಜಿಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇತ್ತು. ಈ ವೇಳೆ ಶಿಕ್ಷಣ ಇಲಾಖೆ ಮಾಹಿತಿ ಪಡೆದುಕೊಂಡಿದ್ದು, ಕಳೆದ ವರ್ಷ 100 ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಕಾಲೇಜುಗಳನ್ನು ವರ್ಗಾಯಿಸಲು ಸರ್ಕಾರ ಸೂಚಿಸಿತ್ತು. ಇದರಲ್ಲಿ ಹನೂರಿನ ಈ ಕಾಲೇಜು ಸೇರಿದ್ದು, ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ವರ್ಗಾಹಿಸಲಾಗಿತ್ತು. ಈ ವೇಳೆಗಾಗಲೇ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿತ್ತು. ಆಗಾಗಿ ಈ ಬಗ್ಗೆ ಹೆಚ್ಚಿನ ಅಗತ್ಯ ಅಗತ್ಯ ಕ್ರಮವಹಿಸಿ ಉನ್ನತ ಶಿಕ್ಷಣ ಸಚಿವರ ಗಮನಕ್ಕೆ ತರಲಾದ ಪರಿಣಾಮ ಕಾಲೇಜು ಹನೂರಿನಲ್ಲಿಯೇ ಉಳಿಸಿಕೊಳ್ಳಲು ಸಾಧ್ಯವಾಯಿತು ಎಂದರು.

ಸ್ಪರ್ಧಾತ್ಮಕ ಈ ಯುಗದಲ್ಲಿ ಸರ್ಕಾರಿ ಉದ್ಯೋಗವನ್ನು ಪಡೆಯಬೇಕಾದರೆ ಓದಿನ ಕಡೆಗೆ ಹೆಚ್ಚಿನ ಒತ್ತನ್ನು ನೀಡಬೇಕಿದೆ. ಆದರೆ ಕೆಲ ವಿದ್ಯಾರ್ಥಿಗಳು ಮೊಬೈಲ್‍ಗೆ ಹೆಚ್ಚು ಮಾರು ಹೋಗಿದ್ದಾರೆ. ಮೊಬೈಲ್‍ನಿಂದ ಅನುಕೂಲವೂ ಇದೆ. ಅನಾನುಕೂಲವು ಇದೆ. ಆದ್ದರಿಂದ ಮೊಬೈಲ್ ಅನ್ನು ಶಿಕ್ಷಣಕ್ಕೆ ಹೆಚ್ಚು ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ವಿವಿಧ ಸ್ಪರ್ಧೇಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಜೇತವನದ ಮನೋರಖ್ಖಿತ ಬಂತೇಜಿ, ಪಪಂ ಸದಸ್ಯ ಮಹೇಶ್, ಪ್ರಾಂಶುಪಾಲ ಶೈಲೇಶ್‍ಕುಮಾರ್, ಉಪನ್ಯಾಸಕರಾದ ರವಿಶಂಕರ್, ಶಾಂತರಾಜು, ವಾಣಿ, ಕೃಪಾ, ಮನೋಜ್‍ಕುಮಾರ್, ಗ್ರಂಥಾಲಯದ ಮುಖ್ಯಸ್ಥ ಸುರೇಂದ್ರ ಹಾಗೂ ವಿದ್ಯಾರ್ಥಿಗಳು ಇದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ