ಹನೂರು: ಸಾರ್ವಜನಿಕರು ತಮ್ಮ ಮನೆಗಳಲ್ಲಿ ಸಾಕುಪ್ರಾಣಿಗಳಿಗೆ ಸಕಾಲದಲ್ಲಿ ಲಸಿಕೆ ಹಾಕಿಸುವುದರ ಮೂಲಕ ಕ್ರಮ ಕೈಗೊಳ್ಳುವಂತೆ ಪಶು ವೈದ್ಯಾಧಿಕಾರಿ ಬಸವರಾಜ್ ತಿಳಿಸಿದರು
ತಾಲೂಕಿನ ಮಾಟಳ್ಳಿ ಗ್ರಾಮದಲ್ಲಿ ಇಂದು ರೇಬಿಸ್ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಗ್ರಾಮಗಳಲ್ಲಿ ಸಾರ್ವಜನಿಕರು ತಮ್ಮ ಮನೆಗಳಲ್ಲಿ ಸಾಕುಪ್ರಾಣಿಗಳನ್ನು ಸಾಕಾಣೆ ಮಾಡುತ್ತಿರುವ ನಾಯಿಗಳಿಗೆ ರೇಬಿಸ್ ಲಸಿಕೆ ಕಡ್ಡಾಯವಾಗಿ ಹಾಕಿಸುವ ಮೂಲಕ ಪ್ರಾಣಿಗಳ ಆರೋಗ್ಯವನ್ನು ಸಹ ಕಾಪಾಡಿಕೊಳ್ಳಬೇಕಾಗಿದೆ ಜೊತೆಗೆ ಮನೆಗಳಲ್ಲಿ ಸಾಕಾಣೆ ಮಾಡುವ ಈ ಪ್ರಾಣಿಗಳಿಂದ ಸಣ್ಣ ಮಕ್ಕಳಿಗೆ ಮತ್ತು ವೈರುಧ್ಯರಿಗೆ ಪ್ರತಿಯೊಬ್ಬ ನಾಗರಿಕರಿಗೂ ಯಾವುದೇ ತೊಂದರೆ ಆಗದಿರಲಿ ಎಂದು ಸರ್ಕಾರ ಸಕಾಲದಲ್ಲಿ ಪ್ರಾಣಿಗಳಿಗೆ ಲಸಿಕೆ ಹಾಕುವ ಅಭಿಯಾನವನ್ನು ಹಮ್ಮಿಕೊಂಡಿದೆ ತಮ್ಮ ಗ್ರಾಮ ಮತ್ತು ನೆರೆಹೊರೆಯ ಮನೆಗಳಲ್ಲಿ ಸಾಕಾಣೆ ಮಾಡುವ ಪ್ರಾಣಿಗಳಿಗೆ ಲಸಿಕೆಗಳನ್ನು ಹಾಕುವ ಮೂಲಕ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜೊತೆಗೆ ತಮ್ಮ ನೆಂಟರಿಷ್ಟರು ಸ್ನೇಹಿತರು ಇತರರಿಗೂ ಸಹ ಈ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರು ತಿಳಿ ಹೇಳುವ ಮೂಲಕ ಸಾಕುಪ್ರಾಣಗಳಿಗೆ ಲಸಿಕೆಗಳನ್ನು ಹಾಕಿಸಿಕೊಳ್ಳುವಂತೆ ಅರಿವು ಮೂಡಿಸುವಂತೆ ತಿಳಿಸಿದರು





