Mysore
21
overcast clouds

Social Media

ಗುರುವಾರ, 13 ಆಗಸ್ಟ್ 2026
Light
Dark

ಹನೂರು :ಮಳೆ ಅವಾಂತರದಿಂದಾದ ಸಮಸ್ಯೆ ಪರಿಶೀಲನೆ

ಹನೂರು: ಅಜ್ಜೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರುಬರದೊಡ್ಡಿ ಹಾಗೂ ದಾಸನದೊಡ್ಡಿ ಗ್ರಾಮಕ್ಕೆ ಸಮಾಜಸೇವಕ ನಿಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಳೆದ ಒಂದು ವಾರದಿಂದ ಸತತ ಮಳೆಯಾಗುತ್ತಿರುವ ಹಿನ್ನೆಲೆ ಉಡುತೊರೆ ಜಲಾಶಯ,ಕುರುಬರ ದೊಡ್ಡಿ ಕೆರೆ ಕೋಡಿ ಹರಿದು ಕುರುಬರದೊಡ್ಡಿ,ದಾಸನದೊಡ್ಡಿ ಗ್ರಾಮಗಳ ಮನೆಗಳಲ್ಲಿ ನೀರು ತುಂಬಿ ಅವಾಂತರ ಸೃಷ್ಟಿಯಾಗಿತ್ತು.
ಈ ಹಿನ್ನೆಲೆ ನಿಶಾಂತ್ ರವರು ತಮ್ಮ ಬೆಂಬಲಿಗರೊಟ್ಟಿಗೆ ಗ್ರಾಮಗಳಿಗೆ ತೆರಳಿ ನೊಂದ ಜನತೆಗೆ ಧೈರ್ಯ ತುಂಬಿ ಜೆ.ಸಿ.ಬಿ ಮೂಲಕ ಮನೆಗಳಿಗೆ ನುಗ್ಗಿರುವ ನೀರನ್ನು ಸಾಧ್ಯವಾದಷ್ಟು ಹೊರತೆಗೆಸಿ,ಮನೆಗಳನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಲು ಕ್ರಮ ಕೈಗೊಂಡಿದ್ದಾರೆ.ಇದರಿಂದ ಸ್ಥಳೀಯರಿಗೆ ಸಮಸ್ಯೆ ಬಗೆಹರಿಯುವ ಭರವಸೆ ಸಿಕ್ಕಿದೆ.

ಇದೇ ಸಂದರ್ಭದಲ್ಲಿ ಸಮಾಜ ಸೇವಕ ನಿಶಾಂತ್ ಮಾತನಾಡಿ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ಸಮಸ್ಯೆಗಳಿದ್ದರೂ ನನ್ನನ್ನು ಸಂಪರ್ಕಿಸಿ ನನ್ನ ಕೈಲಾದ ಮಟ್ಟಿಗೆ ಸೇವೆ ಸಲ್ಲಿಸಲು ಸದಾ ಸಿದ್ಧನಿದ್ದೇನೆ ಎಂದು ತಿಳಿಸಿದರು .

ಈ ಸಂಧರ್ಭದಲ್ಲಿ ಕುರುಬರ ದೊಡ್ಡಿ ಗ್ರಾಮಸ್ಥರು ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!