ಹನೂರು: ಸ್ವಾತಂತ್ರ್ಯ ಹೋರಾಟಗಾರ ಬಾಲ ಗಂಗಾಧರ ತಿಲಕ್ ರವರ ಪ್ರೇರಣೆಯ ಹಾದಿಯಲ್ಲಿ ಗಣಪತಿ ಪ್ರತಿಷ್ಠಾಪಿಸುವ ಈ ಹಬ್ಬ ಪ್ರತಿಯೊಬ್ಬರಲ್ಲಿಯೂ ಸಾಮರಸ್ಯವನ್ನುಮಊಡಿಸುತ್ತಿದೆ.. ಮತ್ತು ಒಗ್ಗಟ್ಟನ್ನು ಮೂಡಿಸಲಾಗಿದೆ ಎಂದು ಚಾಮರಾಜನಗರ ಜಿಲ್ಲಾ ಬಿಜೆಪಿ ಒಬಿಸಿ ಸಂಯೋಜಕ ಬಿ. ವೆಂಕಟೇಶ್ ತಿಳಿಸಿದರು.
ಕ್ಷೇತ್ರ ವ್ಯಾಪ್ತಿಯಲ್ಲಿ ಗೌರಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಸಂಬಂಧ ಬಿಜೆಪಿ ಜಿಲ್ಲಾ ಒಬಿಸಿ ಮೋರ್ಚದ ವತಿಯಿಂದ ಕೈಗೊಳ್ಳಲಾಗಿರುವ ಕಾರ್ಯಕ್ರಮಗಳ ಬಗ್ಗೆ ಸುದ್ದಿಗಾರರೊಡನೆ ಮಾತನಾಡಿದರು.
ಸ್ವತಂತ್ರ ಪೂರ್ವದಲ್ಲಿ ಜನರನ್ನು ಒಗ್ಗೂಡಿಸುವ ಸಲುವಾಗಿ ಬಾಲ ಗಂಗಾಧರ ತಿಲಕ್ ರವರು ಜಾರಿಗೆ ತಂದ ಗ್ರಾಮ ಗ್ರಾಮದಲ್ಲೂ ಬೀದಿ ಬೀದಿಯಲ್ಲಿ ಗಣಪತಿ ಷ್ಠಾಪನೆ ಜನರನ್ನು ಸಾಮರಸ್ಯದಿಂದ ಒಗ್ಗಟ್ಟಿನಿಂದ ಸಾಗುವಂತೆ ಮಾಡುತ್ತಿತ್ತು. ಕ್ಷೇತ್ರ ವ್ಯಾಪ್ತಿಯ 150ಕ್ಕೂ ಹೆಚ್ಚು ಗ್ರಾಮಗಳಲ್ಲಿ240ಕ್ಕೂ ಹೆಚ್ಚು ಗಣೇಶ ಪ್ರತಿಷ್ಠಾಪನೆ ಮಾಡುವ ದಿಸೆಯಲ್ಲಿ ಆರ್ಥಿಕ ಸಹಾಯ ಮಾಡಲಾಗಿದೆ. ಕಳೆದೆರಡು ವರ್ಷಗಳಿಂದ ದೇಶಾದ್ಯಂತ ಕರೋನಾ ವೈರಸ್ ವ್ಯಾಪಿಸಿದ್ದ ಹಿನ್ನೆಲೆ ಎಲ್ಲಾ ಹಬ್ಬಗಳನ್ನು ಸಂಪ್ರದಾಯದಂತೆ ಸರಳವಾಗಿ ಆಚರಿಸಲು ಸರ್ಕಾರ ಆದೇಶಿಸಿತ್ತು. ಈ ವರ್ಷ ಕರೋನಾ ವೈರಸ್ ಕಡಿಮೆ ಇರುವುದರಿಂದ, ಗೌರಿ ಗಣೇಶ ಹಬ್ಬವನ್ನು ಆಚರಣೆ ಮಾಡಲು ಸರ್ಕಾರ ಯಾವುದೇ ನಿರ್ಬಂಧ ಹೇರದೆ ಇರುವುದರಿಂದ ದೇಶಾದ್ಯಂತ ಸಂಭ್ರಮದಿಂದ ಹಬ್ಬ ಆಚರಣೆ ಮಾಡಲಾಗುತ್ತಿದೆ ಇದು ಸಂತಸದ ವಿಚಾರ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಒಬಿಸಿ ಸಂಚಾಲಕ ಬಿ ವೆಂಕಟೇಶ್ ರವರ ಕಚೇರಿ ಸಿಬ್ಬಂದಿಗಳಾದ ರಾಮ್ ಚರಣ್, ಲೋಕೇಶ್ ಜತ್ತಿ, ಅರವಿಂದ್, ಅಪ್ಪು ಇನ್ನಿತರರು ಹಾಜರಿದ್ದರು.