ಮೈಸೂರು: ನೈಸರ್ಗಿಕ ಸಾವಯವ ರೈತ ಗ್ರಾಹಕ ಒಕ್ಕೂಟ ಹಾಗೂ ನಿಸರ್ಗ ಟ್ರಸ್ಟ್ ವತಿಯಿಂದ ಶನಿವಾರ ರೈತರ ಸಂತೆ ಆಯೊಜಿಸಲಾಗಿತ್ತು.
ನಗರದ ಕಾಮಾಕ್ಷಿ ರಸ್ತೆಯ ಹ್ಯಾಪಿಮಾನ್ ಪಾರ್ಕ್ ಹತ್ತಿರವಿರುವ ನಿಸರ್ಗ ಟ್ರಸ್ಟ್ ಆವರಣದಲ್ಲಿ ನಡೆದ ಸಾವಯವ ಪದಾರ್ಥಗಳ ಮಾರಾಟ ಮೇಳದಲ್ಲಿ ೯ ಮಳಿಗೆಗಳನ್ನು ಹಾಕಲಾಗಿತ್ತು. ಸಂತೆಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆಯಿತು.
ರಾಜು ಹಾಡ್ಯ ಅವರು ಡಯಾಬಿಟಿಸ್‌ಗೆ ನೈಸರ್ಗಿಕವಾಗಿ ತಯಾರು ಮಾಡಿರುವ ಮಾತ್ರೆಗಳನ್ನು ಮಾರಾಟಕ್ಕೆ ಇಟ್ಟಿದ್ದರು. ಮಾಂಬಳ್ಳಿ ಚಂದ್ರಶೇಖರ್ ಅವರು ಮಹಿಳೆಯರು ತಯಾರು ಮಾಡಿರುವ ಬುಟ್ಟಿಗಳನ್ನು ಮಾರಾಟಕ್ಕೆ ಇಟ್ಟಿದ್ದರು.
ಟ್ರಸ್ಟಿಗಳಾದ ಸಾಹಿತಿ ಬಸವರಾಜ ಕುಕ್ಕರಹಳ್ಳಿ, ಅಪ್ಪಾಜಿಗೌಡ ಸೇರಿದಂತೆ ಇತರರು ಇದ್ದರು.




