ಮಲ್ಕುಂಡಿ : ಕಾಡಾನೆ ದಾಳಿಗೆ ತೆಂಗು ಬೆಳೆ ನಾಶವಾಗಿರುವ ಘಟನೆ ನಂಜನಗೂಡು ತಾಲ್ಲೂಕಿನ ಬಳ್ಳೂರಹುಂಡಿ ಗ್ರಾಮದಲ್ಲಿ ನಡೆದಿದೆ,
ಗ್ರಾಮದ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನಾಗೇಶ್ ರಾಜ್ ಎಂಬುವವರಿಗೆ ಸೇರಿರುವ ಜಮೀನಿನಲ್ಲಿ ಸುಮಾರು 50 ಕ್ಕೂ ಹೆಚ್ಚು ತೆಂಗಿನ ಬೆಳೆಯನ್ನು ಸಂಪೂರ್ಣವಾಗಿ ನಾಶ ಮಾಡಿದೆ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನಾಗೇಶ್ ರಾಜ್ ಮಾತನಾಡಿ ಈ ಭಾಗದ ರೈತರು ಕಷ್ಟ ಪಟ್ಟು ಬೆಳೆದ ಫಸಲುಗಳು ಕಾಡಾನೆ ದಾಳಿಯಿಂದ ರೈತರು ಕಂಗಲಾಗಿದ್ದಾರೆ ಸಾಲ-ಸೊಲ ಮಾಡಿ ಬೆಳೆದ ಫಸಲುಗಳನ್ನು ಕಾಡಾನೆಗಳು ನಾಶ ಮಾಡಿದರೆ ಸಾಲ ತಿರಿಸುವುದ್ದಾದರೂ ಹೇಗೆ ಇದಕ್ಕೆ ಅರಣ್ಯ ಅಧಿಕಾರಿಗಳೇ ಸಂಪೂರ್ಣ ವಿಫಲವಾಗಿದ್ದಾರೆ ಇದು 3 ನೇ ಬಾರಿ ನಮ್ಮ ಜಮೀನಿಗೆ ನುಗ್ಗಿ ನಾಶ ಮಾಡಿವೇ ಸುತ್ತ ರೈಲು ಕಂಬಿ ನಿರ್ಮಾಣ ಮಾಡಲಾಗಿದೆ ಅದರೆ ನಾಗಣಪುರ ಗ್ರಾಮದ ಬಳಿ ರೈಲ್ವೆ ಕಂಬ ನಿರ್ಮಾಣ ಮಾಡದೆ ಇರುವುದ್ದರಿಂದ ಸುಲಭವಾಗಿ ಕಾಡಾನೆಗಳು ರೈತರ ಜಮೀನಿಗೆ ಲಗ್ಗೆ ಇಟ್ಟು ಫಸಲುಗಳನ್ನು ನಾಶ ಮಾಡುತ್ತಿವೆ ಸರ್ಕಾರ ಇದರ ಬಗ್ಗೆ ಹೆಚ್ಚೆತ್ತುಕೊಂಡು ಕಾಡಾನೆಗಳ ಹಾವಳಿಯನ್ನು ತಪ್ಪಿಸಬೇಕು ತಪ್ಪಿದಲ್ಲಿ ಅರಣ್ಯ ಇಲಾಖೆ ಮುಂಭಾಗದ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ