ಮೈಸೂರು : ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ‘ಹಿಂದೂ ಪದವನ್ನು ಅವಹೇಳನವಾಗಿ ವಿಶ್ಲೇಷಿಸಿದ್ದು ಖಂಡನಾರ್ಹ. ಇಂತಹ ಬಾಯಿಚಪಲವನ್ನು ಯಾರೂ ಮುಂದುವರೆಸಬಾರದು ಎಂದು ಮಾಜಿ ಮೇಯರ್ ಸಂದೇಶ್ ಸ್ವಾಮಿ ಹೇಳಿದ್ದಾರೆ.
ವಿಶ್ವದಲ್ಲಿ ಭಾರತದ ಬಗ್ಗೆ ವಿಶೇಷವಾದ ಗೌರವವಿದೆ. ಇಲ್ಲಿನ ಸಂಪ್ರದಾಯ, ಆಚಾರ-ವಿಚಾರ, ಜನಜೀವನ ಶೈಲಿಯನ್ನು ವಿದೇಶಿಯರು ಅನುಸರಿಸುತ್ತಿದ್ದಾರೆ. ಬ್ರಿಟಿಷರು ಸೇರಿದಂತೆ ಪರಕೀಯರು ಭಾರತದಲ್ಲಿ ನೆಲೆನಿಂತು, ದೌರ್ಜನ್ಯ ನಡೆಸಿದ್ದರೂ ಸಾವಿರಾರು ವರ್ಷಗಳ ಇತಿಹಾಸವುಳ್ಳ ಹಿಂದೂ ಧರ್ಮ ಅಳಿದಿಲ್ಲ. ಹಿಂದೂ ಎನ್ನುವುದು ಒಂದು ಧರ್ಮಸೂಚಿತವಾಗಿದ್ದರೂ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಅವರು ಆ ಪದವನ್ನು ಅವಹೇಳನ ಮಾಡಿದ್ದಾರೆ.
ಅದ್ಯಾವುದೋ ಭಾಷೆಯಲ್ಲಿ ಈ ಅರ್ಥವಿದೆ, ಬೇಕಿದ್ದರೆ ಹುಡುಕಿನೋಡಿ ಎಂದು ಉಡಾಫೆಯಾಗಿಯೂ ಪ್ರತಿಕ್ರಿಯಿಸಿದ್ದಾರೆ. ರಾಜಕೀಯ ಲಾಭಕ್ಕೋ ಅಥವಾ ಮತ್ಯಾವುದೋ ಕಾರಣಕ್ಕೆ ಈ ರೀತಿ ಸಮಾಜದಲ್ಲಿ ಗೊಂದಲ ಸೃಷ್ಟಿಸಿ, ಸಾಮರಸ್ಯ ಹಾಳು ಮಾಡುವುದು ಸರಿಯಲ್ಲ. ಹೀಗೆ ಸಮಾಜ ಒಡೆಯುವ ಕೃತ್ಯವನ್ನು ಯಾವ ನಾಯಕರೂ ಮುಂದುವರೆಸಬಾರದು ಎಂದು ಸಂದೇಶ್ ಸ್ವಾಮಿ ಮನವಿ ಮಾಡಿದ್ದಾರೆ.
ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಹಿಂದೂ ಪದವನ್ನು ಅವಹೇಳನ ಮಾಡಿದ್ದಾರೆ : ಮಾಜಿ ಮೇಯರ್ ಸಂದೇಶ್ ಸ್ವಾಮಿ





