ಬೇಗೂರು (ಗುಂಡ್ಲುಪೇಟೆ ತಾ) : ಹರಿದ ಧ್ವಜ ಹಾರಿಸಿ ಅಪಮಾನವೆಸಗಿರುವ ಘಟನೆ ಗ್ರಾಮದ ಬ್ಯಾಂಕ್ ಆಫ್ ಬರೋಡ ಶಾಖೆಯಲ್ಲಿ ನಡೆದಿದ್ದು, ಪ್ರಕರಣ ಬೇಗೂರು ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಬ್ಯಾಂಕ್ ನೌಕರರು ಸೋಮವಾರ ಬೆಳಿಗ್ಗೆ 10:00 ಸಮಯದಲ್ಲಿ ಹರಿದ ರಾಷ್ಟ್ರಧ್ವಜ ಹಾರಿಸಿರುವುದನ್ನು ಗಮನಿಸಿದ ಸಿದ್ದರಾಜು ಎಂಬುವರು ಹರಿದ ಬಾವುಟವನ್ನು ತೆರವುಗೊಳಿಸಿ ಹೊಸ ಬಾವುಟ ಹಾರಿಸಿದ್ದಾರೆ. ಬೇಗೂರಿನ ಎಸ್ಆರ್ ಬಿಲ್ಡಿಂಗ್ ನಲ್ಲಿರುವ ಬ್ಯಾಂಕ್ ಆಫ್ ಬರೋಡಾದ ಸಹಾಯಕ ವ್ಯವಸ್ಥಾಪಕ ರಾಜೇಶ್ ಹರಿದ ಬಾವುಟ ಹಾರಿಸಿದ್ದಾರೆ ಎಂದು ಜೀವನ ಜ್ಯೋತಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಟಿ ಎಸ್ ನಾಗರಾಜು ಬೇಗೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬೇಗೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲ.