Mysore
23
mist

Social Media

ಸೋಮವಾರ, 17 ನವೆಂಬರ್ 2025
Light
Dark

ಇದೇ ಮೊದಲ ಬಾರಿಗೆ ವೈದ್ಯಕೀಯ ವಸ್ತು ಪ್ರದರ್ಶನ

ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ಆಯೋಜನೆ

ಮೈಸೂರು: ದಸರಾ ಮಹೋತ್ಸವ ಪ್ರಯುಕ್ತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ಸೆ.೨೭ರಿಂದ ೯ ದಿನಗಳ ಕಾಲ ವೈದ್ಯಕೀಯ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ.
ಸೆ.೨೭ರಂದು ಬೆಳಿಗ್ಗೆ ೧೧ಗಂಟೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಪ್ರದರ್ಶನಕ್ಕೆ ಚಾಲನೆ ಉದ್ಘಾಟಿಸಲಿದ್ದಾರೆ. ವಸ್ತು ಪ್ರದರ್ಶನದಲ್ಲಿ ದೇಹದ ರಚನೆ ಹೇಗಿರುತ್ತದೆ? ಕಾಯಿಲೆ ಬಂದಾಗ ಯಾವ ರೀತಿ ಇರುತ್ತದೆ? ಎನ್ನುವುದನ್ನು ಸಾಕ್ಷೀಕರಿಸುವ ಅಂಗಾಗಗಳನ್ನು ಸಾರ್ವಜನಿಕರಿಗೆ ಪ್ರದರ್ಶಿಸಲಾಗುತ್ತದೆ.
ಪ್ರತಿಯೊಬ್ಬರು ಆರೋಗ್ಯ ಕೆಡದಂತೆ ಮಿತ ಆಹಾರ ಬಳಕೆ ಮಾಡುವುದು, ಜೀವನ ಶೈಲಿ, ವ್ಯಾಯಾಮ ಮಾಡಿ ದೇಹವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವುದು, ದೀರ್ಘಾವಧಿ ಬದುಕು ಸಾಧಿಸಲು ಶರೀರದ ಭಾಗಗಳು ಯಾವ ರೀತಿ ಕೆಲಸ ಮಾಡಲಿವೆ ಎಂಬುದನ್ನು ಪ್ರಾತ್ಯಕ್ಷಿಕೆಯ ಮೂಲಕ ಅರಿವು ಮೂಡಿಸಲಾಗುತ್ತದೆ. ಧೂಮಪಾನ, ಮದ್ಯಪಾನದಿಂದ ಉಂಟಾಗುವ ಸಮಸ್ಯೆಗಳು, ಕಾಯಿಲೆ ಬಂದಾಗ ಚಿಕಿತ್ಸೆ ನೀಡಿ ಆರೋಗ್ಯ ಸುಧಾರಿಸಲು ಆಸ್ಪತ್ರೆಗಳು ನಿರ್ವಹಿಸುವ ಕಾರ್ಯ, ಚಿಕಿತ್ಸಾ ವಿಧಾನ, ವೈದ್ಯರ ಪಾತ್ರದ ಕುರಿತಂತೆ ಹೇಳಲಾಗುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಮೂರು ಪ್ರಮುಖ ವಿಚಾರಗಳಿದ್ದು, ಸ್ಕ್ರೀನಿಂಗ್, ರೋಗಪತ್ತೆ ಮತ್ತು ಚಿಕಿತ್ಸೆ ನೀಡುವುದು ಪ್ರಮುಖವಾಗಿರುವುದರಿಂದ ಹಿರಿಯ ತಜ್ಞ ವೈದ್ಯರು ಪ್ರದರ್ಶನದಲ್ಲಿ ಮಾಹಿತಿ ಕೊಡಲಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಚ್.ಪ್ರಸಾದ್ ತಿಳಿಸಿದರು.

ದಸರಾ ಮಹೋತ್ಸವ ಸಂದರ್ಭದಲ್ಲಿ ಮೊದಲ ಬಾರಿಗೆ ವೈದ್ಯಕೀಯ ವಸ್ತು ಪ್ರದರ್ಶನ ನಡೆಯಲಿದ್ದು, ಸಾರ್ವಜನಿಕರು ವೀಕ್ಷಿಸಿ ಪ್ರಯೋಜನ ಪಡೆಯಬೇಕು. ಆರೋಗ್ಯ ಕಾಪಾಡುವಂತಹ ಪ್ರಮುಖ ಅಂಶಗಳನ್ನು ದೇಹದ ಅಂಗಾಂಗಗಳ ಮೂಲಕವೇ ವಿವರಿಸಲಾಗುತ್ತದೆ.

-ಡಾ.ಕೆ.ಎಚ್.ಪ್ರಸಾದ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!