ಮೈಸೂರು: ಬಂಡೀಪುರದ ಮೊದಲ ಉಪಸಂರಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಎಸ್. ಶಿವಲಿಂಗಯ್ಯ (86). ಗುರುವಾರ ಬೆಳಿಗ್ಗೆ ನಿಧನರಾಗಿದ್ದರು..
ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಯಲ್ಲಿ ವಿಶೇಷ ಕಾಳಜಿ ಹೊಂದಿದ್ದು ಹಲವಾರು ವಿನೂತನ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ ಹೆಗ್ಗಳಿಕೆ ಇವರದ್ದು. ನಾಗರಹೊಳೆ, ಬಂಡೀಪುರ, ಬಿಳಿಗಿರಿರಂಗನ ಬೆಟ್ಟ, ಕೆ.ಗುಡಿ, ಮೂಡಬಿದಿರೆ ಮುಂತಾದ ಅರಣ್ಯ ವಲಯಗಳಲ್ಲೂ ಇವರು ಸೇವೆ ಸಲ್ಲಿಸಿದ್ದರು. ಇವರು ಪತ್ನಿ ಭಾಗಮ್ಯ, ಮಕ್ಕಳಾದ ಶಶಿಕಲಾ ಸುರೇಶ್, ಲತಾ ಚಂದ್ರಶೇಖರ್, ಡಾ. ಶೀಲಾ ಶಿವಕುಮಾರ್, ಅಳಿಯಂದಿರು, ಮೊಮ್ಮಕ್ಕಳು, ಹಾಗೂ ಮರಿ ಮೊಮ್ಮಕ್ಕಳು, ಹಾಗೂ ಕುಟುಂಬ ವರ್ಗದವರನ್ನು ಹೊಂದಿದ್ದಾರೆ. ಅಂತ್ಯಕ್ರಿಯೆ ಚಾಮರಾಜನಗರ ತಾಲ್ಲೂಕಿನ ಸ್ವಗ್ರಾಮ ಚಂದಕವಾಡಿಯಲ್ಲಿ ನೆರವೇರಿತು.