ಹನೂರು : ಆತ್ಮಹತ್ಯೆಗೆತ್ನಿಸಿದ ಮಹಿಳೆಯೋರ್ವಳನ್ನು ಪೊಲೀಸ್ ಪೇದೆ ಹಾಗೂ ಆತನ ಸ್ನೇಹಿತ ರಕ್ಷಿಸಿರುವ ಘಟನೆ ಮಲೆ ಮಾದೇಶ್ವರ ಬೆಟ್ಟದಲ್ಲಿ ಜರುಗಿದೆ.
ಮಲೆ ಮಾದೇಶ್ವರ ಬೆಟ್ಟ ಪೊಲೀಸ್ ಠಾಣೆ ಮುಂಭಾಗವಿರುವ ಕೊಳದಲ್ಲಿ ಅಪರಿಚಿತ ಮಹಿಳೆ ಆತ್ಮಹತ್ಯೆಗೆ ಯತ್ನಿಸಿ ನೀರಿಗೆ ಬಿದ್ದಿದ್ದಾಳೆ. ಜೋರು ಶಬ್ದ ಕೇಳಿದ ಪೊಲೀಸ್ ಪೇದೆ ರಾಕೇಶ್ ಹಾಗೂ ಆತನ ಸ್ನೇಹಿತ ಪ್ರಶಾಂತ್ ರವರು ತಕ್ಷಣ ಕೊಳಕ್ಕೆ ಹಾರಿ ಮಹಿಳೆಯನ್ನು ಪ್ರಾಣಾಪಾಯದಿಂದ ಕಾಪಾಡಿ, ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಚೇತರಿಸಿಕೊಂಡಿದ್ದಾರೆ.
ಈ ಕಾರ್ಯಕ್ಕೆ ಮ, ಬೆಟ್ಟ ಪೊಲೀಸ್ ಠಾಣೆಯ ವೃತ ನಿರೀಕ್ಷಕ ಬಸವರಾಜು ಹಾಗೂ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.