Mysore
27
broken clouds

Social Media

ಶುಕ್ರವಾರ, 02 ಅಕ್ಟೋಬರ್ 2026
Light
Dark

ನಕಲಿ ವೈದ್ಯರ ಹಾವಳಿ : ಮಾಹಿತಿ ಮೇರೆಗೆ ಸ್ಥಳಕ್ಕೆ ಅಧಿಕಾರಿಗಳ ಭೇಟಿ, ಪರಿಶೀಲನೆ

ಹನೂರು : ನಕಲಿ ವೈದ್ಯರ ಹಾವಳಿ ಹೆಚ್ಚಾದ ಹಿನ್ನಲೆ ಬುಧವಾರ ಅಜ್ಜೀಪುರ ಗ್ರಾಮಕ್ಕೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಲೂಕಿನಲ್ಲಿ ನಕಲಿ ವೈದ್ಯರು ಕ್ಲಿನಿಕ್ ನಡೆಸುತ್ತಿದ್ದರು ಎಂಬ ದೂರಿನ ಮೇಲೆ ಭೇಟಿ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿಗಳು  ನಕಲಿ ಕ್ಲಿನಿಕ್ ಗಳಿಗೆ ಬೀಗ ಹಾಕಿದ್ದಾರೆ.

ಇದೆ ಸಂದರ್ಭದಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿದ  ಡಿ ಎಚ್ ಓ  ಡಾಕ್ಟರ್ ವಿಶ್ವೇಶ್ವರಯ್ಯ  ನಕಲಿ  ವೈದ್ಯರ ಹಾವಳಿ ಹೆಚ್ಚಾದ ಹಿನ್ನಲೆ ಮೊದಲ ಬಾರಿ ನೋಟೀಸ್ ಕೊಟ್ಟಿದ್ದೇವೆ ಆದರೇ ನೋಟಿಸ್ ಗೆ ಹೆದರದೆ ಮತ್ತೆ ಚಿಕಿತ್ಸೆ ನೀಡುತ್ತಿದ್ದರು ಎಂಬ ಮಾಹಿತಿ ಬಂದ ಮೇಲೆ  ಇಂದು ನಕಲಿ ಕ್ಲಿನಿಕ್ ಗಳನ್ನು  ಸೀಜ್ ಮಾಡಿದ್ದೇವೆ. ಜೊತೆಗೆ ಸಾರ್ವಜನಿಕರು ಸಹಕಾರ ನೀಡಬೇಕು ಅಲ್ಲದೆ ನಮ್ಮ ಸಿ ಎಚ್ ಒ  ಹಾಗೂ ಎ ಎನ್ಅ ಎಂ ಅವರನ್ನು  ಇಲ್ಲೇ ಉಳಿದು ಸೇವೆ ನೀಡಬೇಕು ಎಂದು ಆದೇಶ ನೀಡಿದ್ದೇವೆ. ಇಲ್ಲಿ ಉಳಿಯಲು ವ್ಯವಸ್ಥೆ ಸಹ ಇದ್ದು ಆರೋಗ್ಯ ಸೇವೆ ಸಿಗಲಿದೆ ಎಂದರು.

ಉಪಕೇಂದ್ರಕ್ಕೆ ಭೇಟಿ : ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೇಂದ್ರಕ್ಕೆ ಭೇಟಿ ನೀಡಿ ಕೇಂದ್ರದ ಸಿಬ್ಬಂದಿಗಳಿಗೆ ಆರೋಗ್ಯ ಸೇವೆ ನೀಡಲು ಸೂಚನೆ ನೀಡಿದರು.

ಇದೆ ಸಂದರ್ಭದಲ್ಲಿ ತಾಲೂಕು ಪ್ರಭಾರ ಆರೋಗ್ಯಾಧಿಕಾರಿ ಡಾ. ಪ್ರಕಾಶ್, ವೈದ್ಯರಾದ ಡಾ. ಮನು, ಸಿ ಎಚ್ ಒ ಸಿದ್ದೇಶ್ ಹಾಗೂ ಆಶಾ ಕಾರ್ಯಕರ್ತರು ಇದ್ದರು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!