Mysore
19
few clouds

Social Media

ಗುರುವಾರ, 16 ಜನವರಿ 2025
Light
Dark

ಮೇಲಾಧಿಕಾರಿಯ ಹಿಂಸೆಗೆ ಬೇಸತ್ತು ವಸತಿ ಗೃಹ ಸಿಗದೇ ರೇಷ್ಮೆ ಇಲಾಖೆಯ ನೌಕರ ಸಾವಿಗೆ ಯತ್ನ

ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕರ ಹಿಂಸೆಗೆ ಬೇಸತ್ತು ಕಛೇರಿಯಲ್ಲೇ ವಿಷ ಸೇವನೆ.
ನೌಕರನ ಪರಿಸ್ಥಿತಿ ಗಂಭೀರ.

ಚಾಮರಾಜನಗರ:ಕೊಳ್ಳೇಗಾಲ ತಾಲ್ಲೂಕಿನ ಮಲ್ಲಳ್ಳಿಮಾಳ ಗ್ರಾಮದ ಲೋಕೇಶ್ ಎಂಬುವವರು ರೇಷ್ಮೆ ಇಲಾಖೆಯಲ್ಲಿ ಡಿ ಗ್ರೂಪ್ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದು. ಇಬ್ಬರು ಮಕ್ಕಳನ್ನು ಚಾ.ನಗರದ ಸೆಂಟ್ ಜೋಸೆಫ್ ಶಾಲೆಗೆ ಸೇರಿಸಿ ನಗರದಲ್ಲೇ ಉಳಿದಿದ್ದು ೧ ವರ್ಷದಿಂದ ವಸತಿ ಗೃಹಕ್ಕಾಗಿ ಅರ್ಜಿ ಸಲ್ಲಿಸಿ ಅಳೆದು ಸಾಕಾಗಿದ್ದರು. ಬುಧವಾರ ರೇಷ್ಮೆ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕರಾದ ಶ್ವೇತಾ ಅವರಿಗೆ ಮನವಿ ಸಲ್ಲಿಸಿ ಮತ್ತೊಮ್ಮೆ ವಸತಿ ಗೃಹ ಕಲ್ಪಿಸುವಂತೆ ಕೇಳಿಕೊಂಡಿದ್ದರು.

ಲೋಕೇಶ್ ಅವರಿಗೆ ಒಂದು ವರ್ಷಗಳಿಂದಲೂ ಮಾನಸಿಕ ಹಿಂಸೆ ನೀಡುತ್ತಿದ್ದ, ಜಾತಿ ದೌರ್ಜನ್ಯ ಮಾಡುತ್ತಿದ್ದ ಅಧಿಕಾರಿ ಶ್ವೇತಾ ಅವರು ನಾನು ಇರುವವರೆಗೂ ನೀನು ವಸತಿ ಗೃಹ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂಬ ದರ್ಪದ ಮಾತುಗಳನ್ನು ಹಾಡಿದ್ದು, ಮನನೊಂದ ನೌಕರ ಕಛೇರಿಯಲ್ಲೇ ವಿಷ ಕುಡಿದು ಸಾವಿಗೆ ಯತ್ನಿಸಿದ್ದಾರೆ.

ಸದ್ಯಕ್ಕೆ ಚಾ.ನಗರದ ಸಿಮ್ಸ್ ಆಸ್ಪತ್ರೆಯಲ್ಲಿ ಲೋಕೇಶ್ ಅವರನ್ನು ದಾಖಲು ಮಾಡಿದ್ದು ಪರಿಸ್ಥಿತಿ ಗಂಭೀರವಾಗಿದೆ ಎಂದು ಲೋಕೇಶ್ ಅವರ ಪತ್ನಿ ಸುಧಾಮಣಿ ಆಂದೋಲನಕ್ಕೆ ಮಾಹಿತಿ ನೀಡಿದರು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ