ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ 2022 ರ ಅಂಗವಾಗಿ ದಸರಾ ಗಜಪಡೆಗಳಿಗೆ ಆ.14 ರಿಂದ ಪ್ರತಿನಿತ್ಯ (ಬನ್ನಿಮಂಟಪದ ವರೆಗೆ ) ತಾಲೀಮು ಆರಂಭವಾಗಲಿದೆ ಎಂದು ಡಿಸಿಎಫ್ ಕರಿಕಾಳನ್ ಅವರು ಇಂದು ಆಂದೋಲನಕ್ಕೆ ತಿಳಿಸಿದ್ದಾರೆ.
ಮಾಧ್ಯಮದೊಟ್ಟಿಗೆ ಮಾತನಾಡಿದ ಅವರು ದಸರಾ ಆನೆಗಳಿಗೆ ಮೈಸೂರಿನ ಧನ್ವಂತ್ರಿ ರಸ್ತೆಯಲ್ಲಿರುವ ತೂಕ ಹಾಕುವ ವೇವ್ ಬ್ರಿಡ್ಜ್ ನಲ್ಲಿ ಆನೆಗಳಿಗೆ ತೂಕ ಹಾಕಲಾಯಿತು. ಇಲ್ಲಿಗೆ ಆನೆಗಳನ್ನು ಬಲರಾಮ ಗೇಟ್ ನಿಂದ ವಾರ್ತಾಭವನದ ಪಕ್ಕದಲ್ಲಿರುವ ಸಾಯಿರಾಮ್ ವೇ ಬ್ರಿಡ್ಜ್ ಮಾರ್ಗವಾಗಿ ಮೆಡಿಕಲ್ ಕಾಲೇಜಿಗೆ ಬಂದು ಕೆ. ಆರ್. ಸರ್ಕಲ್ ಬಳಿ ವಾಪಸ್ ಕರೆದುಕೊಂಡು ಬರಲಾಯಿತು ಈ ಮೂಲಕ ಆನೆಗಳಿಗೆ ಮೂರುವರೆ ಕಿ.ಮೀ ವಾಕ್ ಮಾಡಿಲಾಯಿತು ಎಂದರು.
ಇನ್ನೂ ಆನೆಗಳ ಆರೈಕೆಯ ಬಗ್ಗೆ ಮಾತನಾಡಿ ಆನೆಗಳಿಗೆ ಆರೈಕೆಯು ಬಹಳ ಚೆನ್ನಾಗಿ ನಡೆಯುತ್ತಿದೆ. ನೆನ್ನೆಯಿಂದ ಮೂರುವರೆ ಕಿ.ಮೀ ನಡೆದುಕೊಂಡು ಬಂದಿವೆ. ಅನೆಗಳಿಗೆ ಆ.14 ನೇ ತಾರೀಖಿನಿಂದ ಪ್ರತಿನಿತ್ಯ ಜಂಬೂಸವಾರಿಯ ತಾಲೀಮು ಮಾಡಿಸಲಾಗುವುದು ಎಂದರು. ಈಗ ಆನೆಗಳಿಗೆ ಆಹಾರ ನೀಡುತ್ತಿರುವುದರಿಂದ ಅವುಗಳಿಗೆ ವ್ಯಾಯಾಮದ ಅಗತ್ಯ ಬಹಳಷ್ಟಿದೆ ಹೀಗಾಗಿ ನಾಳೆ ಮತ್ತು ನಾಳಿಂದು ಅರಮನೆ ಒಳಗಡೆ ಬೆಳಿಗ್ಗೆ 2 ರಿಂದ 3 ಕಿ.ಮೀ ಮತ್ತು ಸಂಜೆ 3 ಕಿ.ಮೀ ಆನೆಗಳನ್ನು ಹೊರಗೆ ಕರೆದುಕೊಂಡು ಹೋಗಲಾಗುವುದು ಎಂದರು.