ಮೈಸೂರು : ವಿಶ್ವವಿಖ್ಯಾ ಮೈಸೂರು ದಸರಾ 2022ರ ಹಿನ್ನೆಲೆ ನಗರದ ಡಿ ಎ ವಿ ಪಬ್ಲಿಕ್ ಶಾಲೆಯಲ್ಲಿ 13 ನೇ ವರ್ಷದ ದಸರಾ ಬೊಂಬೆ ಪ್ರದರ್ಶನ ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಮೇಳ ಅಯೋಜನೆ ಮಾಡಲಾಗಿದೆ..
ಪ್ರದರ್ಶನದಲ್ಲಿ ತಲಕಾಡು ಪಂಚಲಿಂಗೇಶ್ವರ ದೇವಸ್ಥಾನ ಗಳ ಮಾದರಿ ಶಬರಿಮಲೆ ಅಯ್ಯಪ್ಪ,ಜಂಬೂಸವಾರಿ ಮಾದರಿಯ ಇನ್ನು ಅನೇಕ ಸ್ತಬ್ಧ ಚಿತ್ರಗಳನ್ನು ರಚಿಸಲಾಗಿದೆ. ಶಾಲಾ ಮಕ್ಕಳು ಸಾಂಪ್ರಾದಾಯಿಕ ನೃತ್ಯ, ಗಾಯನ ಮತ್ತು ಪ್ರದರ್ಶನಗಳು ಕೂಡ ನಡೆಯಿತು.
ವಿದ್ಯಾರ್ಥಿಗಳು ಬೆಳೆದ ಸಾವಿರಾರು ಹೂವಿನ ಗಿಡಗಳ ಅಲಂಕಾರ ಕಣ್ಮನ ಸೆಳೆಯುವಂತಿವೆ. ತೆಂಗಿನ ಚಿಪ್ಪಿನಿಂದ ಮಾಡಿದ ಮನೆ ಮಾದರಿ, ಸಂಗೀತ ಉಪಕರಣಗಳು,ವಾಲ್ ಹಾಂಗಿಗ್ಸ್ ಹಾಗೂ ದಸರಾಗೆ ಸಂಬಂಧಪಟ್ಟ ಚಿತ್ರಕಲೆ ಏರ್ಪಡಿಸಿದರು.
ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಿದ್ದು ಈ ಕಾರ್ಯಕ್ರಮದ ಪ್ರತಿವರ್ಷವು ಪ್ರಥಮ ಬಹುಮಾನ ದೊರಕಿದೆ.





