ಬೇಗೂರು(ಗುಂಡ್ಲುಪೇಟೆ ತಾ.): ಬೇಗೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಸತತ ಮಳೆ ಹಲವಾರು ಅವಾಂತರಗಳನ್ನು ಸೃಷ್ಟಿಸಿದೆ.
ಕೋಟೆಕೆರೆ ಗ್ರಾಮದ ಕೆರೆ ಕೋಡಿ ಬಿದ್ದು ನೀರು ಹರಿದು ಬಂದು ಬೆಳಚಲವಾಡಿ ಗ್ರಾಮದ ಹೊರವಲಯದಲ್ಲಿ ಬಾಲಕಿಯರ ವಿದ್ಯಾರ್ಥಿ ನಿಲಯ, ರೈತ ಸಂಪರ್ಕ ಕೇಂದ್ರ ಹಾಗೂ ಬೇಗೂರು – ಬೆಳಚಲವಾಡಿ ರಸ್ತೆ ಜಲಾವೃತಗೊಂಡು ಈ ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸಾವರರು ಪಾದಚಾರಿಗಳು ಪರದಾಡುವಂತಾಯಿತು.

ಬೇಗೂರು ಗ್ರಾಮದ ಗುಂಡಪ್ಪ, ಕಾಳಿಂಗಪ್ಪ ನವರ ಮನೆ ರಸ್ತೆ ಪಕ್ಕದಲ್ಲಿರುವ ಅಂಗಡಿಗಳು ಮಳೆಯ ನೀರಿನಲ್ಲಿ ಜಲಾವೃತವಾಗಿವೆ. ಚಿಕ್ಕಾಟಿ ಗ್ರಾಮದಲ್ಲಿ ಕೆರೆ ತುಂಬಿ ಹರಿಯುತ್ತಿದ್ದು ಕೆರೆಗೆ ಹರಿದು ಬರುತ್ತಿದ್ದ ನೀರಿನ ಕಾಲುವೆಗಳಲ್ಲಿ ನೀರು ಹರಿದು ಕೆರೆಗೆ ಹೋಗದ ಕಾರಣ ಕಾಲುವೆಗಳ ಅಕ್ಕಪಕ್ಕದಲ್ಲಿರುವ ೧೦ ಕ್ಕೂ ಹೆಚ್ಚು ಮನೆಗಳು ಮಳೆ ನೀರಿನಲ್ಲಿ ಮುಳುಗಿವೆ. ಮನೆಯಲ್ಲಿದ್ದ ದವಸ ಧಾನ್ಯಗಳು ನೀರಿನಲ್ಲಿ ಮುಳುಗಿವೆ.






