Light
Dark

ಸಿದ್ದರಾಮಯ್ಯ ಕೈ ಬಲ ಪಡಿಸಲು ಪೂರ್ವಜ್ ವಿಶ್ವನಾಥ್ ಸಜ್ಜು

ಮೈಸೂರು : ತಗಡೂರು ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ವಿಶ್ವನಾಥ್ ಪುತ್ರ ಪೂರ್ವಜ್ ವಿಶ್ವನಾಥ್ ಕಾಂಗ್ರೆಸ್ ಪಕ್ಷಕ್ಕೆ  ಸೇರ್ಪಡೆಗೆ ನಿರ್ಧಾರ ಮಾಡಿರುವುದನ್ನು ತಿಳಿಸಿದ್ದಾರೆ.

ಕಾಂಗ್ರೆಸ್‌ ಪಾದಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಬಗ್ಗೆ ಮಾತನಾಡಿದ ಅವರು  ಕಾಂಗ್ರೆಸ್ ಪಕ್ಷಕ್ಕೆ  ಸೇರ್ಪಡೆಯಾಗುತ್ತಿರುವುದರ ಕುರಿತು  ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದೇನೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನನ್ನ ತಂದೆ ಎಚ್ ವಿಶ್ವನಾಥ್ ಅವರಿಗೂ ತಿಳಿಸಿದ್ದೇನೆ. ಅವರು ಅದು‌ ನಿನ್ನ ಇಷ್ಟ ಅಂತಾ ಹೇಳಿದ್ದಾರೆ. ಸಿದ್ದರಾಮಯ್ಯ ಕೈ ಬಲಪಡಿಸಲು ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿದ್ದೇನೆ. ಸಿದ್ದರಾಮಯ್ಯ ಅವರು ಮುಂದಿನ ಸಿಎಂ ಆಗಲು ಜೊತೆಯಲ್ಲಿ ನಿಲ್ಲುತ್ತೇನೆ. ನಾನೂ ಸಹ ದಾವಣಗೆರೆ ಕಾರ್ಯಕ್ರಮಕ್ಕೂ ಹೋಗಿದ್ದೆ
ಸಿದ್ದರಾಮಯ್ಯ ಮುಂದೆ ಸಿಎಂ ಆಗುವ ಎಲ್ಲಾ ವಾತಾವರಣ ಇದೆ ಎಂದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ